ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಯುವ ವಿಚಾರ ವೇದಿಕೆ : ಸ್ವಾತಂತ್ರ್ಯ ಅಮೃತೊತ್ಸವ ದ್ವಜಾರೋಹಣ ಹಾಗೂ ಮನೋರಂಜನಾ ಗ್ರಾಮೀಣ ಕ್ರೀಡಾಕೂಟ

Posted On: 16-08-2022 07:12AM

ಉಡುಪಿ : ಯುವ ವಿಚಾರ ವೇದಿಕೆ (ರಿ.) ಕೊಳಲಗಿರಿ ಉಪ್ಪೂರು ಇವರ ವತಿಯಿಂದ, ನಮ್ಮ ದೇಶ ಸ್ವತಂತ್ರ ಪಡೆದು 75 ಸಂವತ್ಸರ ಪೂರೈಸಿರುವ ಶುಭ ಸಂದರ್ಭದ "ಅಮೃತೋತ್ಸವ" ಕಾರ್ಯಕ್ರಮದನ್ವಯ ಸ್ವಾತಂತ್ರದ ಮುನ್ನಾ ದಿನ ಸಾರ್ವಜನಿಕರಿಗೆ ವಾಲಿಬಾಲ್ , ತ್ರೋಬಾಲ್, ಹಾಗೂ ಇನ್ನಿತರ ಗ್ರಾಮೀಣ ಮನೋರಂಜನಾ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ, ಮಕ್ಕಳಿಗೆ, ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ನಡೆಸಲಾಗಿತ್ತು. ಆಗಸ್ಟ್ 15ರಂದು ಅಮೃತೋತ್ಸವ ದ್ವಜಾರೋಹಣದ ನಂತರ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಧ್ವಜಾರೋಹಣವನ್ನು ಉಪ್ಪೂರು ಗ್ರಾಮದ 20 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಊರಿನ ಹೆಮ್ಮೆಯ ವೀರ ಯೋಧ ರಮೇಶ್ ಪೂಜಾರಿ ತೆಂಕಬೆಟ್ಟು ಇವರು ನೆರವೇರಿಸಿದರು. ಕ್ರೀಡಾ ಸ್ಪರ್ಧಾ ಕಾರ್ಯಕ್ರಮವನ್ನು ಲಗೋರಿ ಪಲ್ಲೆಗೆ ಬಾಲ್ ಎಸೆಯುವುದರ ಮೂಲಕ ಯುವ ಉದ್ಯಮಿ ಆಗಿರುವ ಸಂದೀಪ್ ನಾಯಕ್ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತ್ ಉಲ್ಲಾ ಬೇಗ್, ಪಂಚಾಯತ್ ಸದಸ್ಯರಾದ ಅಶ್ವಿನ್ ರೋಚ್, ಸತೀಶ್ ಪೂಜಾರಿ, ದೇಹ ದಾನಿ ಸಮಾಜ ಸೇವಕ ಹಿತೈಷಿ ರಮೇಶ್ ಕರ್ಕೇರಾ, ಸ್ಥಳೀಯರು ನಿರ್ವತ್ತ ಬ್ಯಾಂಕ್ ಉದ್ಯೋಗಿ ಪ್ರಭಾಕರ್ ನಾಯಕ್, ಮುಂಬೈ ಯುವ ಉದ್ಯಮಿ ಮೈಕಲ್, ವೇದಿಕೆಯ ಹಿರಿಯರಾದ ಮಾಧವ ಪಾಣ, ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ನಾಗೇಶ್, ಉಪ್ಪೂರು ವ್ಯ.ಸೆ.ಸ.ಸಂಘ ಇದರ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸಂದೀಪ್ ಶೆಟ್ಟಿ ಹಾಗೂ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸ್ಪರ್ಧಾ ಕಾರ್ಯಕ್ರಮದಲ್ಲಿ ಸ್ಥಳೀಯ 8 ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ತಂಡಗಳು ಸಾರ್ವಜನಿಕರು , ಶಾಲಾ ಮಕ್ಕಳು ವೇದಿಕೆಯ ಸದಸ್ಯರು ಭಾಗವಹಿಸಿದ್ದರು. ಕೊಳಲಗಿರಿಯ ಪುಷ್ಪಲತಾ ಸಸ್ಯಾಲಯದವರು ನೀಡಿದ ಸಸ್ಯಗಳನ್ನು ಅತಿಥಿ ಗಣ್ಯರಿಗೆ ಸ್ಮರಣಿಕೆಯಾಗಿ ನೀಡಲಾಯಿತು. ಅಧ್ಯಕ್ಷರಾದ ದಿನೇಶ್ ಶೆಟ್ಟಿ ಸ್ವಾಗತಿಸಿದರು, ಕು. ಕಾವ್ಯ ಸ್ಪರ್ಧಿಗಳ ಪಟ್ಟಿಯನ್ನು ವಾಚಿಸಿ, ಸದಾಶಿವ ಕುಮಾರ್, ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಕೊಳಲಗಿರಿ ವಂದಿಸಿದರು.