ಶಿರ್ವ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಶಿರ್ವ ವಲಯದ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ಹಾಗೂ ಪಂಜಿನ ಮೆರವಣಿಗೆಯು ಆಗಸ್ಟ್ 14ರಂದು ಶಿರ್ವದಲ್ಲಿ ನಡೆಯಿತು.
ದಕ್ಷಿಣ ಪ್ರಾಂತ್ಯದ ಮಾತೃ ಶಕ್ತಿ ಸಹ ಸಂಯೋಜಕಿ ಸುರೇಖಾರಾಜ್ ದಿಕ್ಸೂಚಿ ಭಾಷಣ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಶಿರ್ವ ವಲಯದ ಅಧ್ಯಕ್ಷರಾದ ವಿಖ್ಯಾತ ಭಟ್ ವಹಿಸಿದ್ದರು
ಈ ಸಂದರ್ಭದಲ್ಲಿ ಜಿಲ್ಲಾ ಸೇವಾಪ್ರಮುಖ್ ದೀಪಕ್ ಮೂಡುಬೆಳ್ಳೆ, ಮಠಮಂದಿರ ಸಂಪರ್ಕ್ ಕುಶಲ ಪೆರ್ಡೂರು, ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು, ಪ್ರಖಂಡ ಕಾರ್ಯದರ್ಶಿ ರಾಜೇಂದ್ರ ಶಣೈ, ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ್ ಶಿರ್ವ, ಶಿರ್ವ ವಲಯ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್, ವಲಯ ಭಜರಂಗದಳ ಸಹ ಸಂಚಾಲಕ್ ನೀರಜ ಪೂಜಾರಿ, ಎಲ್ಲಾ ಘಟಕಾಧ್ಯಕ್ಷರು ಹಾಗೂ ಮಾತೃಶಕ್ತಿ ಸಂಯೋಜಕಿಯರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಮೆಂಡನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ನಾಯಕ್ ವಂದಿಸಿದರು.