ಉಡುಪಿ : ಇಲ್ಲಿನ ಬಹ್ಮಗಿರಿಯ ಲಯನ್ಸ್ ಭವನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ನೂರಾರು ತುಳು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಹಯೋಗದಿಂದ ಆಗಸ್ಟ್ 14ರಂದು ಆಟಿಡೊಂಜಿ ದಿನ ಎಂಬ ಕಾರ್ಯಕ್ರಮವು ಜರಗಿತು.
ಕಾರ್ಯಕ್ರಮದ ಉಧ್ಘಾಟನೆಯನ್ನು ಹಿರಿಯ ಅರ್ಚಕರಾದ ಕೇಶವ ಶಾಂತಿಯವರು ಉಧ್ಘಾಟಿಸಿದರು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತುಳುನಾಡಿನ ಸಂಸ್ಕೃತಿ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪನೆ, ಉದ್ದೇಶ, ಸಾಮಾಜಿಕ ಹೋರಾಟ, ಸಾಮಾಜಿಕ ನೆರವು ಹಾಗೂ ಅಗತ್ಯತೆ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಟಪಾಡಿ ಶಂಕರ್ ಪೂಜಾರಿ ಆಟಿ ತಿಂಗಳ ವಿಶೇಷತೆಯ ಬಗ್ಗೆ ಹೇಳಿದರು.
ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಕೃಷ್ಣಮೂರ್ತಿ ಆಚಾರ್ಯರವರು ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಾ, ತುಳುನಾಡ ಸಂಸ್ಕೃತಿ ಉಳಿಯಬೇಕಾದಲ್ಲಿ ಈ ಸಂಘಟನೆ ಅಗತ್ಯ ಹಾಗೂ ನಿಮ್ಮೊಂದಿಗೆ ಸದಾ ಇರುವ ಭರವಸೆ ನೀಡಿದರು. ಮುಖ್ಯ ಅತಿಥಿಯಾದ ಉಡುಪಿ ನಗರ ಠಾಣಾ
ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ರವರು ಕಾನೂನಿನ ಬಗ್ಗೆ ಹಾಗೂ ತುಳುನಾಡಿನ ಬಗ್ಗೆ, ತುಳುನಾಡ ರಕ್ಷಣಾ ವೇದಿಕೆಯ ಅಗತ್ಯತೆಯ ಬಗ್ಗೆ ಸವಿವರದೊಂದಿಗೆ ವಿಸ್ತರಿಸಿ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಉತ್ತಮ ಕೆಲಸಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು. ಜನತಾದಳ ಜಾತ್ಯಾತೀತ ಉಡುಪಿ ಜಿಲ್ಲಾ ಕಾರ್ಯಧ್ಯಕ್ಷರಾದ ವಾಸುದೇವ್ ರಾವ್ ರವರು ತುಳುನಾಡ ಸಂಸ್ಕೃತಿ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದರು. ಹಿರಿಯ ವಕೀಲರಾದ ಹಮ್ಜತ್ ಹೆಜಮಾಡಿಯವರು ತುಳುನಾಡು ಮತ್ತು ತುಳು ಭಾಷೆಯ ಬಗ್ಗೆ ಸಂಪೂರ್ಣವಾಗಿ ವಿಸ್ತರಿಸಿ ರಾಷ್ಟ್ರಾದ್ಯಂತ ತುಳುನಾಡ ಸಂಸ್ಕೃತಿ ಬೆಳಗಲಿಯೆಂದು ಶುಭ ಹಾರೈಸಿದರು. ಉಡುಪಿ ಜಿಲ್ಲಾ ಮತ್ತು ದ.ಕ ಮೀನು ಮಾರಾಟ ಫೆಡರೇಶನ್ ನ ಅಧ್ಯಕ್ಷರಾದ ಯಶ್ಪಾಲ್ ಸುವರ್ಣರವರು ತುಳುನಾಡು ಮತ್ತು ತುಳುವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಸಭಾ ಸದಸ್ಯರು ಹಾಗೂ ವಿರೋಧ ಪಕ್ಷ ನಾಯಕರಾದ ರಮೇಶ್ ಕಾಂಚನ್ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಮುಖ್ಯ ಅತಿಥಿಗಳಾದ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಇದರ ಸಂಸ್ಥಾಪಕರಾದ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಶೆಟ್ಟಿ,
ಮಹಿಳಾ ಘಟಕ ಗೌರವ ಸಲಹಾಗಾರರಾದ ಶೋಭ ಪಾಂಗಳ, ಗೌರವ ಸಲಹಾಗಾರರಾದ ಸುಧಾಕರ್ ಅಮೀನ್, ಜಿಲ್ಲಾ ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣ ಕುಮಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಸುಕನ್ಯ ಪ್ರಭಾಕರ್, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಮಹಿಳಾ ಘಟಕ ಉಪಾಧ್ಯಕ್ಷರು ಹಾಗೂ ಕಾನೂನು ಸಲಹಾಗರರಾದ ನಾಗಲಕ್ಷ್ಮಿ, ಯುವ ಘಟಕದ ಅಧ್ಯಕ್ಷರಾದ ಸುನಿಲ್ ಫೆರ್ನಾಂಡಿಸ್, ಐಟಿ ವಿಂಗ್ ಅಧ್ಯಕ್ಷರಾದ ರೋಷನ್ ಡಿಸೋಜ, ಕಾರ್ಮಿಕ ಘಟಕ ಅಧ್ಯಕ್ಷರಾದ ಜುನೈದ್, ಜಿಲ್ಲಾ ಉಪಾಧ್ಯಕ್ಷರಾದ ರಹೀಂ, ಜೊತೆ ಕಾರ್ಯದರ್ಶಿ ಶುಭಾಶ್ ಸುಧಾನ್, ಕಾರ್ನಿಕ ಘಟಕ ಪ್ರಧಾನ ಕಾರ್ಯದರ್ಶಿ ರಿತೇಶ್ ರಾವ್, ಖಜಾಂಚಿ ಡ್ಯಾನಿ, ಜಿಲ್ಲಾ ಕಾರ್ಯದರ್ಶಿ ಮಜೀದ್, ಮಹಳಾ ಘಟಕ ಜಿಲ್ಲಾ ಉಪಾಧ್ಯಕ್ಷರಾದ ಶಾಂಭವಿ, ಮಹಿಳಾ ಘಟಕ ಜಿಲ್ಲಾ ಉಪಾಧ್ಯಕ್ಷರಾದ ಸುಲತ, ಮಹಿಳಾ ಘಟಕ ಜೊತೆ ಕಾರ್ಯದರ್ಶಿ ಅನುಪಮ, ರೇಣುಕಾ, ಜಿಲ್ಲಾ ಕಾರ್ಯದರ್ಶಿಯಾದ ಸದಾನಂದ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಕ್ಷಾ ರಿಧಮಿಕ್ ವಾಯಿಸ್ ಆಫ್ ಉಡುಪಿ ಹಾಗೂ ಉಡುಪಿ ಕರೊಕೆ ತಂಡದಿಂದ ತುಳು ಸಂಗೀತ ರಸಮಂಜರಿ ನೀಡಲ್ಪಟ್ಟಿತು. ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿಯಾದ ಮೊಹಮ್ಮದ್ ಹಾರಿಸ್ ರವರು ನಿರೂಪಣೆ ಮಾಡಿದರು.