ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಸ್ವಾತಂತ್ರ್ಯ ದಿನಾಚರಣೆ ; ಸನ್ಮಾನ
Posted On:
16-08-2022 08:09PM
ಉಡುಪಿ : ಅಖಿಲ ಭಾರತ ತುಳುನಾಡ
ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆಯ ವತಿಯಿಂದ ಆಗಸ್ಟ್ 15ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭ ಬೊಬ್ಬರ್ಯ ದೈವಸ್ಥಾನದಲ್ಲಿ ವಠಾರದಲ್ಲಿ ಜರಗಿತು.
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿ ಶೆಟ್ಟಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದರು.
ಒಕ್ಕೂಟದ ಹಿರಿಯರಾದ ಹಾಗೂ ಸದಸ್ಯರಾದ ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ದೈವಚಾಕ್ರಿ ಮಾಡುತ್ತಿರುವ ಸರಳ ಸಜ್ಜನಿಕೆ ಹೆಸರಾಂತ ಕೊರಗ ಸಮುದಾಯದ ಡೋಲು ಬಾರಿಸುವ ಮೂಲಕ ದೈವಚಾಕ್ರಿ ಮಾಡಿದ ಬಾಬು ಅಲೆವೂರ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೊಬ್ಬರ್ಯ ಯುವ ಸೇವ ಸಮಿತಿ ಅಧ್ಯಕ್ಷರಾದ ವರದರಾಜ ಕಾಮತ್, ಉಡುಪಿ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಹಾಗೂ ಉಡುಪಿ ಕೋಶಾಧಿಕಾರಿಯಾದ ಶ್ರೀಧರ್ ಪೂಜಾರಿ,
ಉಪಾಧ್ಯಕ್ಷರಾದ ಯೋಗೀಶ್ ಪೂಜಾರಿ ಹಾಗೂ
ಮಹೇಶ್ ಪಂಬದ, ವಾಮನ, ಸದಸ್ಯರು ಉಪಸ್ಥಿತಿಯಿದ್ದರು.
ಸಂಘಟನೆ ಕಾರ್ಯದರ್ಶಿಯಾದ ರಕ್ಷಿತ್ ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಯಾದ
ವಿನೋದ್ ಶೆಟ್ಟಿ ವಂದಿಸಿದರು.