ಶಂಕರಪುರ ರೋಟರಿ, ಅಂಗಸಂಸ್ಥೆಗಳಿಂದ ಇಂಟರ್ನ್ಯಾಷನಲ್ ಯೂತ್ ಡೇ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ
Posted On:
18-08-2022 09:44PM
ಕಾಪು : ರೋಟರಿ ಶಂಕರಪುರ ಹಾಗೂ
ಅಂಗ ಸಂಸ್ಥೆಗಳಾದ ರೋಟರಿ ಸಮುದಾಯದಳ ಇನ್ನಂಜೆ, ರೋಟರಾಕ್ಟ್ ಕ್ಲಬ್ ಸುಭಾಸ್ ನಗರ, ಇನ್ನರ್ ವೀಲ್ ಕ್ಲಬ್ ಶಂಕರಪುರ ಜೊತೆಯಾಗಿ ಇಂಟರ್ನ್ಯಾಷನಲ್ ಯೂತ್ ಡೇ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಯೂತ್ ಡೇ ಬಗ್ಗೆ ಡಾ| ರಾಯನ್ ಮತಾಯಸ್ ರವರು ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದರು.
ರಕ್ಷಾ ಬಂಧನ ಕಾರ್ಯಕ್ರಮದ ಮಹತ್ವದ ಬಗ್ಗೆ ರೊ. ನಂದನ್ ಕುಮಾರ್ ಮಾತನಾಡಿದರು.
ಹುಟ್ಟುಹಬ್ಬವನ್ನು ಆಚರಿಸಲಿರುವ ಮಾಲಿನಿ ಶೆಟ್ಟಿ ಹಾಗೂ ನವೀನ್ ಅಮೀನ್ ಗೆ ಶುಭ ಕೋರಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಶಂಕರಪುರ, ರೋಟರಾಕ್ಟ್ ಸುಭಾಷ್ ನಗರ, ಇನ್ನರ್ ವೀಲ್ ಶಂಕರಪುರ, ರೋಟರಿ ಸಮುದಾಯದಳದ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷರಾದ ರೊ.ಗ್ಲಾಡಸನ್ ಕುಂದರ್ ರವರು ಸ್ವಾಗತ ಮಾಡಿದರು. ರೋಟರಿಯ ಕಾರ್ಯದರ್ಶಿ ರೊ.ಸಿಲ್ವಿಯಾ ಕಸ್ಟಲೀನೋ ವಂದಿಸಿದರು.