ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ‌ : ಟಿಕ್ಕಾ ಅಂಗಡಿಯೊಳಕ್ಕೆ ಕಾರು : ಇಬ್ಬರಿಗೆ ಗಾಯ

Posted On: 18-08-2022 11:08PM

ಕಟಪಾಡಿ : ನಿಂತಿದ್ದ ಕಾರಿಗೆ ಮತ್ತೊಂದು ಕಾರು ಢಿಕ್ಕಿ ಹೊಡೆದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಟಿಕ್ಕಾ ಅಂಗಡಿಗೆ ಕಾರು ನುಗ್ಗಿ ಅಂಗಡಿಯವ ಮತ್ತು ಗ್ರಾಹಕ ಗಾಯಗೊಂಡ ಘಟನೆ ಗುರುವಾರ ರಾತ್ರಿ ‌ಕಟಪಾಡಿಯಲ್ಲಿ ನಡೆದಿದೆ.

ಘಟನಾ ಸ್ಥಳಕ್ಕೆ ಕಾಪು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಗ್ರಾಹಕ ಕಟಪಾಡಿ ಕಟಪಾಡಿ ನಿವಾಸಿಯಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಟಿಕ್ಕಾ ಅಂಗಡಿಯವ ಉತ್ತರಪ್ರದೇಶ ಮೂಲದವನಾಗಿದ್ದು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ ಎಂದು ತಿಳಿದು ಬಂದಿದೆ.