ಫ್ರೆಂಡ್ಸ್ ಗ್ರೂಪ್ ಕಳತ್ತೂರು : ಮುದ್ದುಕೃಷ್ಣ, ಆಟೋಟ ಸ್ಪರ್ಧೆ
Posted On:
21-08-2022 01:36PM
ಕಾಪು :ಫ್ರೆಂಡ್ಸ್ ಗ್ರೂಪ್ ಕಳತ್ತೂರು ವತಿಯಿಂದ ಕುಶಲ ಶೇಖರ ಶೆಟ್ಟಿ ಇಂಟರ್ನಾಷನಲ್ ಆಡಿಟೋರಿಯಂನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪ್ರಥಮ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆಯು ಜರಗಿತು.
ಕಾರ್ಯಕ್ರಮವನ್ನು ವಾಸು ಶೆಟ್ಟಿ ದಂಪತಿಗಳು ಉದ್ಘಾಟಿಸಿದರು.
ಮುದ್ದುಕೃಷ್ಣ ಸ್ಪರ್ಧೆ ಫಲಿತಾಂಶ : ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಅನಿಕಾ, ಅಗಸ್ತ್ಯ, ಜಿಯಾ ಸುವರ್ಣ ಸಮಾನ ಬಹುಮಾನ ಗಳಿಸಿದರು.
2ರಿಂದ 4 ವರ್ಷದ ವಿಭಾಗದಲ್ಲಿ ಶ್ರೀವತ್ಸ ಪ್ರಥಮ, ನೈರಿತಿ ರಾವ್ ದ್ವಿತೀಯ ಬಹುಮಾನ ಗಳಿಸಿದರು.
5ರಿಂದ 7 ವರ್ಷದ ವಿಭಾಗದಲ್ಲಿ ಮನಸ್ವಿ ದೇವಾಡಿಗ ಪ್ರಥಮ, ದೃತಿನ್ ದ್ವಿತೀಯ ಬಹುಮಾನ ಗಳಿಸಿದರು.
8ರಿಂದ 13 ವರ್ಷದ ವಿಭಾಗದಲ್ಲಿ ಜನ್ವಿತ್ ದೇವಾಡಿಗ ಪ್ರಥಮ, ತಾನಿಯಾ ಮತ್ತು ಸನ್ವಿತ್ ದ್ವಿತೀಯ ಬಹುಮಾನ ಗಳಿಸಿದರು. ಒಂದರಿಂದ ಏಳು ವರ್ಷದವರೆಗಿನ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶೇಖರ ಶೆಟ್ಟಿ, ರಂಗನಾಥ ಶೆಟ್ಟಿ, ಅನಿತಾ ಉಪಾಧ್ಯಾಯ, ಹರಿಣಿ ರೈ, ಫ್ರೆಂಡ್ಸ್ ಗ್ರೂಪ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಅನಿತಾ ಉಪಾಧ್ಯಾಯ, ಪ್ರತಿಭಾ ಶೆಟ್ಟಿ, ಪ್ರತಿಮಾ ಶೆಟ್ಟಿ ಸಹಕರಿಸಿದರು. ಪ್ರೀತಂ ಶಿರ್ವ ಕಾರ್ಯಕ್ರಮ ನಿರೂಪಿಸಿದರು.