ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಶ್ರೀ ವೆಂಕಟರಮಣ ದೇವಳದ ವಾರ್ಷಿಕ ಮಹಾಸಭೆ

Posted On: 21-08-2022 09:12PM

ಕಾಪು : ಇತಿಹಾಸ ಪ್ರಸಿದ್ದ ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಇಂದು ವಾರ್ಷಿಕ ಮಹಾಸಭೆ ಹತ್ತು ಸಮಸ್ತರ ಉಪಸ್ಥಿತಿ ಯಲ್ಲಿ ಜರಗಿತು. ಕಳೆದ ಐದು ವರ್ಷ ಪೂರ್ಣಗೊಂಡು ಮುಂದಿನ ಐದು ವರ್ಷಕ್ಕೆ ಹೊಸದಾಗಿ ಆಡಳಿತ ಮಂಡಳಿಯ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇಂದಿನ ಸಭೆಯಲ್ಲಿ ಸಭಿಕರ ನೂತನ ಆಡಳಿತ ಮಂಡಳಿ ಪುನರಾಯ್ಕೆ ಪ್ರಕ್ರಿಯೆ ಮೂಲಕ ದೇವಳದ ಆಡಳಿತ ಮೊಕ್ತೇಸರರಾಗಿ ಪ್ರಸಾದ್ ಗೋಕುಲದಾಸ್ ಶೆಣೈ ಹಾಗೂ ಮೊಕ್ತೇಸರರಾಗಿ ಸದಾಶಿವ ಕಾಮತ್ , ಶ್ರೀಕಾಂತ್ ಭಟ್, ಎಮ್.ರಾಜೇಶ್ ಶೆಣೈ, ರಾಮ್ ನಾಯಕ್ ಕಾಪು ಇವರು ಆಯ್ಕೆಯಾದರು.

ಮೇಲ್ವಿಚಾರಕ ಮಂಡಳಿ ಸದಸ್ಯರಾಗಿ ಸುನಿಲ್ ಪೈ, ಮೋಹನದಾಸ ಕಿಣಿ, ಕೃಷ್ಣಾನಂದ ನಾಯಕ್ , ಚಂದ್ರಕಾಂತ್ ಕಾಮತ್, ರಾಜೇಶ್ ಶೆಣೈ ಮಜೂರ್ ಇವರು ಆಯ್ಕೆಯಾದರು. ಪುನರಪಿ ಆಯ್ಕೆಯಾದ ಮಾಜಿ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ ಮಾತನಾಡಿ ಕಾಪುವಿನ ಸಮಸ್ತ ಸಮಾಜ ಬಾಂಧವರ ಪ್ರೋತ್ಸಾಹ ಮತ್ತು ಸಹಕಾರದಿಂದ ಐದು ವರ್ಷಗಳಲ್ಲಿ ಪ್ರಾಮಾಣಿಕ ವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ಇನ್ನು ಮುಂದಿನ ದಿನಗಳಲ್ಲಿ ಇದೇ ರೀತಿ ತಮ್ಮ ಸಹಕಾರ ಬಯಸುತ್ತೇನೆ. ಅಲ್ಲದೆ ದೇವರ ದರ್ಶನ ಕ್ಕೆ ಬರುವ ಭಕ್ತಾದಿಗಳಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಿ ದೇವಳದ ಅಭಿವೃದ್ಧಿ ಗೆ ದುಡಿಯುತ್ತೇನೆ ಎಂದರು.

ಮಹಾಸಭೆಯಲ್ಲಿ ಹಿರಿಯರಾದ ಸುರೇಶ್ ಪ್ರಭು, ಕೆ.ಎಲ್.ನಾಯಕ್, ಕರುಣಾಕರ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.