ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎಸ್‌ಕೆಪಿಎ ಕಾಪು ವಲಯ :ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಇಬ್ಬರು ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ

Posted On: 22-08-2022 08:48PM

ಪಡುಬಿದ್ರಿ : ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್‌ನ ಕಾಪು ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಪಡುಬಿದ್ರಿಯ ಎಸ್ಎಸ್ ಸಭಾಭವನದಲ್ಲಿ ಕಾಪು ವಲಯದ ಇಬ್ಬರು ಹಿರಿಯ ಸದಸ್ಯರಾದ ಬೆಳ್ಮಣ್‌ನ ವೆಂಕಟ್ರಾಯ ಕಾಮತ್ ದಂಪತಿ ಹಾಗೂ ಪಡುಬಿದ್ರಿಯ ಕರುಣಾಕರ್ ನಾಯಕ್ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತ ರಾಮಚಂದ್ರ ಆಚಾರ್ಯ ಮಾತನಾಡಿ, ಛಾಯಾಗ್ರಹಣದ ಹಿಂದಿನ ದಿನಗಳನ್ನು ಛಾಯಾಗ್ರಾಹಕರು ನೆನಪು ಮಾಡಬೇಕಿದೆ. ಪೋಲಿಸರು ಕೂಡಾ ಛಾಯಾಗ್ರಾಹಕರನ್ನು ಅವಲಂಭಿಸಬೇಕಾದ ಅನಿವಾರ್ಯ ಪರಿಸ್ಥಿತಿಯೂ ಇತ್ತು. ಛಾಯಾಗ್ರಾಹಕರಲ್ಲಿ ಉತ್ತಮ ಕಲಾವಿದನಿದ್ದು, ಅದನ್ನು ಗ್ರಹಿಸಬೇಕಿದೆ ಎಂದರು.

ಕಾಪು ವಲಯ ಎಸ್‌ಕೆಪಿಎ ಅಧ್ಯಕ್ಷ ವಿನೋದ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ರವಿ ಕುಮಾರ್ ಕಟಪಾಡಿ, ಕೋಶಾಧಿಕಾರಿ ರಾಘವೇಂದ್ರ ಭಟ್ ಉಪಾಧ್ಯಕ್ಷ ಸಚಿನ್ ಉಚ್ಚಿಲ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ ಐತಾಳ್, ಜತೆ ಕಾರ್ಯದರ್ಶಿ ಪ್ರಕಾಶ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.

ವಿನೋದ್ ಕಾಂಚನ್ ಸ್ವಾಗತಿಸಿದರು. ಶ್ರೀನಿವಾಸ ಐತಾಳ್ ನಿರೂಪಿಸಿದರು. ಸಚಿನ್ ಉಚ್ಚಿಲ ವಂದಿಸಿದರು.