ಕಾಪು : ಬ್ಯಾಂಕ್ ಆಫ್ ಬರೋಡ ಕಾಪು ಬ್ರಾಂಚ್ ವತಿಯಿಂದ ನಡೆದ ಬಿ.ಒ.ಬಿ ವಲ್ಡ್೯ ಆಪ್ ಮೇಳಕ್ಕೆ ಉಡುಪಿ ರೀಜಿನಲ್ ಅಧಿಕಾರಿ ರೋಹಿತ್ ಸಿನ್ಹಾ ಕಾಪು ಬ್ಯಾಂಕ್ ಆಫ್ ಬರೋಡ ಕಛೇರಿಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಗ್ರಾಹಕರುಗಳಾದ ದಿವಾಕರ.ಬಿ.ಶೆಟ್ಟಿ ಕಳತ್ತೂರು, ಸಮಾಜ ಸೇವಕ ಮೊಹಮ್ಮದ್ ಫಾರೂಕ್ ಚಂದ್ರನಗರ, ಕಾಪು ಉದ್ಯಮಿ ಎಚ್.ಅಬ್ದುಲ್ಲಾ, ಬ್ಯಾಂಕ್‌ನ ಪ್ರಬಂಧಕರಾದ ನಮೃತ ಸಿನ್ಹಾ, ಸಚಿನ್, ಬಬಿತ, ಶ್ರೀನಿಧಿ, ರೇವತಿ, ಧನ್ಯ ಹಾಗೂ ಮುಂತಾದವರು ಉಪಸ್ಥಿತರಿದ್ದರು.