ಬಂಟಕಲ್ಲು : ಉಡುಪಿ ಜಿಲ್ಲೆ ರಚನೆಯಾಗಿ ೨೫ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅದ್ದೂರಿ ಆಚರಣೆಯ ಅಂಗವಾಗಿ ಕಾರ್ಕಳದ ಭುವನೇಂದ್ರ ಕಾಲೇಜಿನಿಂದ ಬೆಳ್ಮಣ್ ವರೆಗೆ ಮ್ಯಾರಥಾನ್ ಓಟ ಪ್ರಾರಂಭಗೊಂಡಿದ್ದು, ಬುಧವಾರ ಸಂಜೆ ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಕಾಲೇಜು ಎದುರು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್, ಬಿಜೆಪಿ ನಾಯಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ವೀಣಾ ಶೆಟ್ಟಿ. ಗೀತಾಂಜಲಿ ಸುವರ್ಣ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಗಿರೀಶ್ ಕಾಂಚನ್, ಅರುಣ್ ಶೆಟ್ಟಿ ಪಾದೂರು, ಶ್ರೀ ಕಾಂತ್ ನಾಯಕ್, ನವೀನ್ ಶೆಟ್ಟಿ ಕುತ್ಯಾರು, ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.