ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ ಜೋಕಾಲಿ ಫ್ರೆಂಡ್ಸ್ : ವೇಷ ಧರಿಸಿ ಬಂದ ಹಣ ಹಸ್ತಾಂತರ ; ಸನ್ಮಾನ

Posted On: 25-08-2022 09:30PM

ಕಟಪಾಡಿ : ಇಲ್ಲಿಯ ಪಳ್ಳಿಗುಡ್ಡೆಯ ಜೋಕಾಲಿ ಫ್ರೆಂಡ್ಸ್ ಸಂಸ್ಥೆಯು ಶ್ರೀಕೃಷ್ಣ ಜನ್ಮಾಷ್ಟಮಿಯಂದು 4 ವರುಷದಿಂದ ವೇಷಧರಿಸಿ ಮಕ್ಕಳಿಗೆ ಸಹಾಯ ಮಾಡುತ್ತಿದ್ದು ಈ ಬಾರಿಯೂ ಸಹಾಯಹಸ್ತ ನೀಡಿದೆ.

ಈ ಬಾರಿಯ ವೇಷದಿಂದ 1 ಲಕ್ಷ 75 ಸಾವಿರ ಸಂಗ್ರಹಿತವಾಗಿದ್ದು ಅದನ್ನು ಹೆಜಮಾಡಿ ಮತ್ತು ಕಟಪಾಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಮಕ್ಕಳಿಗೆ ಹಸ್ತಾಂತರಿಸಲಾಯಿತು.

ಕೃಷಿ ಬಗ್ಗೆ ಅಸಡ್ಡೆ ತೋರುತ್ತಿರುವ ಈ ಕಾಲಘಟ್ಟದಲ್ಲಿ ಕೃಷಿ ಕಾಯಕದಲ್ಲಿ ತೊಡಗಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. ಸ್ಥಳೀಯವಾಗಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಯುವ ಮುಖಂಡ ಯಶವಂತ್ ಸುವರ್ಣ, ಗೀತಾಂಜಲಿ ಸುವರ್ಣ, ಪೇಟೆಬೆಟ್ಟು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಮುಖ್ಯಸ್ಥ ತುಕಾರಾಮ ಕಟ್ಪಾಡಿ, ರಾಜೇಶ್ ಕಟ್ಪಾಡಿ, ಸ್ಥಳೀಯ ಮಸೀದಿಯ ಖತೀಬರಾದ ಜೋಹರಿ, ಜೋಕಾಲಿ ಫ್ರೆಂಡ್ಸ್ ಅಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಗಣೇಶ್, ಪ್ರಭಾಕರ ಕೋಟೆ ಮತ್ತಿತರರು ಉಪಸ್ಥಿತರಿದ್ದರು.