ಪಡುಬಿದ್ರಿ : ಇಲ್ಲಿನ ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಹಾಜಿ ಪಿ. ಕೆ. ಮುಹಿಯುದ್ದೀನ್ ಲಚ್ಚಿಲ್ ಆಯ್ಕೆಯಾಗಿದ್ದಾರೆ. ಪಡುಬಿದ್ರೆಯ ಉರ್ದು ಶಾಲಾ ಸಂಚಾಲಕ ಶಬ್ಬೀರ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ ಶುಕೂರ್, ಕಾರ್ಯದರ್ಶಿ ಶೇಖ್ ಇಸ್ಮಾಯಿಲ್, ಜೊತೆ ಕಾರ್ಯದರ್ಶಿ ಹಾಜಿ ಎಸ್. ಪಿ. ಉಮರ್ ಫಾರೂಕ್, ಕೋಶಾಧಿಕಾರಿ ಹಾಜಿ ಎ. ಎಚ್. ಮುಹಮ್ಮದ್, ಸದಸ್ಯರಾಗಿ ನಝೀರ್ ಸಿ. ಪಿ. , ಅಕ್ಬರ್ ಪಿ. ಎಂ. , ಇಂತಿಯಾರ್, ಬೇಂಗ್ರೆ ಬಾಷಾ, ಮಜಲಕೋಡಿ ಮಯ್ಯದ್ದಿ, ಹಂಝ ಅಬ್ಬಾಸ್, ಲೆಕ್ಕ ಪರಿಶೋಧಕರಾಗಿ ಹಾಜಿ ಹಮ್ಮಬ್ಬ ಮೊಯ್ದಿನ್ ಆಯ್ಕೆಯಾಗಿದ್ದಾರೆ. ಪಡುಬಿದ್ರೆ ಜುಮಾ ಮಸೀದಿಯ ಖತೀಬ್ ಹಾಜಿ ಎಸ್. ಎಂ, ಅಬ್ದುಲ್ ರಹಿಮಾನ್ ವಂದಿಸಿದರು.