ಬಂಟಕಲ್ಲು : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 18ನೇ ವರ್ಷದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರದಾನ ಅರ್ಚಕರಾದ ಮಧ್ವರಾಜ್ ಭಟ್ ರವರು ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ. ಮೊದಲಾಗಿ ಗಡಿಯ ರಕ್ಷಣೆ ಮಾಡುವ ಸೈನಿಕರಿಗೆ ನಮಿಸೋಣ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಉಡುಪಿ ದೊಡ್ಡಣ್ಣಗುಡ್ಡೆ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಾಮಾನಂದ ಗುರೂಜಿ ಸಾಧಕರಾದ ರಾಮಕೃಷ್ಣ ಶರ್ಮಾ ಬಂಟಕಲ್ಲು, ಜಯಪ್ರಕಾಶ್ ರಾವ್ ಹೇರೂರ್, ರಮೇಶ್ ಆಚಾರ್ಯ ಬಂಟಕಲ್ಲು, ಗಣೇಶ್ ಕುಲಾಲ್ ಪಂಜಿಮಾರ್, ಸುಭಾಸ್ ನಾಯಕ್ ಸಡಂಬೈಲ್, ಕು. ಪ್ರಿಯಾಂಕಾ ಆಚಾರ್ಯ ಹೇರೂರು ಇವರನ್ನು ಸನ್ಮಾನಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಆಶೀರ್ವದಿಸಿದರು.
ಬಂಟಕಲ್ಲು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಎಡ್ವರ್ಡ್ ಮೆನೆಜಸ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೌರವಾಧ್ಯಕ್ಷ ಶಂಕರ್ ನಾಯಕ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕು. ಸುರಭಿ ಮತ್ತು ಕು. ಖುಷಿ ಪ್ರಾರ್ಥಿಸಿದರು. ವಿಘ್ನೇಶ್ ಶೆಟ್ಟಿ ಪೊಡಮಲೆ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ದಿನೇಶ್ ದೇವಾಡಿಗ ಬಹುಮಾನದ ಪಟ್ಟಿ ವಾಚಿಸಿ ಧನ್ಯವಾದ ನೀಡಿದರು. ಅಧ್ಯಕ್ಷರಾದ ಮಾಧವ ಕಾಮತ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮಾಧವ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.