ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎಲ್ಲೂರು : ಡಾ.ಸುಬ್ರಹ್ಮಣ್ಯನ್ ಸ್ವಾಮಿ ನಿಧಿಯಿಂದ ನಿರ್ಮಾಣವಾಗಲಿರುವ ರಸ್ತೆಗೆ ಗುದ್ದಲಿ ಪೂಜೆ

Posted On: 06-09-2022 07:19PM

ಎಲ್ಲೂರು : ನಿಕಟಪೂರ್ವ ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅವರ ಎಂಪಿ‌ ಫಂಡ್ ನಿಂದ ಮಂಜೂರಾದ ಕೆಮುಂಡೇಲು‌ ಹಿ.ಪ್ರಾ. ಶಾಲೆಯಿಂದ ಜೆನ್ನಿ ರಾಮರಾವ್ ಮನೆಯವರೆಗಿನ‌ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ವಿರಾಟ್ ಹಿಂದೂಸ್ಥಾನ್ ಸಂಗಮ್ ನ ರಾಷ್ಟ್ರೀಯ ಪ್ರಧಾನ‌ಕಾರ್ಯದರ್ಶಿ ಜಗದೀಶ ಶೆಟ್ಟಿ‌ ಅವರು‌ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಕೆಮುಂಡೇಲು ಹಿ.ಪ್ರಾ.ಶಾಲೆಯಲ್ಲಿ ಎಲ್ಲೂರು ಪಂಚಾಯತ್ ಉಪಾಧ್ಯಕ್ಷರಾದ ಪ್ರಮೀಳಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ‌ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅವರ ವಿರಾಟ್ ಹಿಂದೂಸ್ಥಾನ್ ಸಂಗಮ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಗ್ರಾಮಾಂತರ ಪ್ರದೇಶಗಳಲ್ಲಿ ಅಗತ್ಯ ಬೇಕಿರುವ ಕೆಲಸಗಳಿಗಾಗಿ ಸ್ವಾಮಿಯವರ ಅನುದಾನಗಳನ್ನು ಹಂಚುವುದು ಹಾಗೂ ಸಮಾಜದ ಅನಿವಾರ್ಯತೆಗೆ ಸ್ಪಂದಿಸುವ ಅವರ ಆಶಯವನ್ನು ಅನುಷ್ಠಾನಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ಜಗದೀಶ ಶೆಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ.ಎಲ್.ಕುಂಡಂತಾಯ ಅವರು ಶೆಟ್ಟಿಯವರನ್ನು ಊರವರ ಪರವಾಗಿ ಸಮ್ಮಾನಿಸಿದರು.ಎಲ್ಲೂರು ಪಂಚಾಯತ್ ಪಿ.ಡಿ.ಒ.ಪ್ರದೀಪ ಕುಮಾರ್ ಸದಸ್ಯರಾದ ದಯಾನಂದ,ಹರೀಶ, ಶಾಂತಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಎ.ಪಿ.ಜೆನ್ನಿ , ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ .ಎಸ್. ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ ಶೆಟ್ಟಿ‌ .ಮಾಜಿ ಪಂಚಾಯತ್ ಸದಸ್ಯರಾದ ಜೆನಟ್ ಬರ್ಬೋಜ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಸುಕೇತಾ ಸ್ವಾಗತಿಸಿದರು. ಸುನೀತಾ ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯಶ್ರೀ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲೆಗೆ ಭೇಟಿ ನೀಡಿದ ಜಗದೀಶ ಶೆಟ್ಟಿಯವರು ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಸುಮಾರು 150 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ ಇರುವುದನ್ನು ಮನಗಂಡು ಸರಕಾರದ ಗಮನಸೆಳೆಯುವುದಾಗಿ ಹೇಳಿದರು.