ಇನ್ನಂಜೆ : ರೋಟರಿ ಸಮುದಾಯ ದಳ ಇನ್ನಂಜೆ ಮಾತೃಸಂಸ್ಥೆ ರೋಟರಿ ಕ್ಲಬ್ ಶಂಕರಪುರ (ವಲಯ - 5 ರೋಟರಿ ಜಿಲ್ಲೆ 3182) ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಸೆಪ್ಟೆಂಬರ್ 11, ಆದಿತ್ಯವಾರ ಸಂಜೆ 6.30ಕ್ಕೆ ಇನ್ನಂಜೆಯ ದಾಸ ಭವನದಲ್ಲಿ ಜರಗಲಿದೆ.
ರೋಟರಿ ಕ್ಲಬ್, ಶಂಕರಪುರ ಅಧ್ಯಕ್ಷರಾದ ಗ್ಲ್ಯಾಡ್ಸನ್ ಕುಂದರ್ ಪದಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಇನ್ನಂಜೆ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ
ರಾಜೇಶ್ ರಾವ್, ಆರ್.ಸಿ.ಸಿ. ಜಿಲ್ಲಾ ಪ್ರತಿನಿಧಿ ರೊ. ಜಿ. 3182 ನಾಗರಾಜ್ ಎಂ., ಝೋನಲ್ ಕೋ-ಆರ್ಡಿನೇಟರ್ ರೋನ್ - 5 ಗುರುರಾಜ್ ಭಟ್,
ರೋಟರಿ ಶಂಕರಪುರ ಪೂರ್ವಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್, ರೋಟರಿ ಶಂಕರಪುರ ಪೂರ್ವ ಕಾರ್ಯದರ್ಶಿ ಜೆರಾಮ್ ರೊಡ್ರಿಗೆಸ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.