ಉಚ್ಚಿಲ : ಮಹಾಲಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಸಮಯದಲ್ಲಿ ಆಸೆ ಇಟ್ಟುಕೊಂಡು ಪ್ರಾರ್ಥನೆ ಮಾಡಿದ್ದು ಇಂದು ಆ ಮಹಾಲಕ್ಷ್ಮಿ ನಿಜ ಮಾಡಿ ತೋರಿಸುವ ಮೂಲಕ ಪವಾಡ ಮೆರೆದಿದ್ದಾಳೆ ಎಂದು
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಗೌರವಾಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಹೇಳಿದರು.
ಅವರು ದ.ಕ.ಮೊಗವೀರ ಮಹಾಜನ ಸಂಘ(ರಿ.)ಇದರ ವತಿಯಿಂದ ದಕ್ಷಿಣದ ಉಪ್ಪಳ ದಿಂದ ಉತ್ತರದ ಶೀರೂರುವರೆಗಿನ ಮೊಗವೀರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಗುರಿಕಾರರಿಗೆ ಗೌರವ ಧನ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ರವಿವಾರ ಮಾತನಾಡಿದರು.
ಜೀರ್ಣೋದ್ಧಾರ ಸಮಯದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಇದ್ದ ಕನಸ್ಸು ಇಂದು ನನಸಾಯಿತು. ಮಂಗಳೂರು ದಸರಾ ಮಾದರಿಯಲ್ಲಿ ಉಚ್ಚಿಲ ದಸರಾ ಆಚರಿಸೋಣ ಎಂದರು.
ಎಸ್.ಎಸ್. ಎಲ್.ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 25 ಲಕ್ಷ ರೂ.ಹಾಗೂ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್ ಕಲಿಕೆಯ ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ಸೇರಿದಂತೆ ಒಟ್ಟಾರೆಯಾಗಿ 50 ಲಕ್ಷ ರೂಪಾಯಿಯ ಸಹಕಾರ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಸ್. ಎಸ್. ಎಲ್.ಸಿ, ಪಿಯುಸಿ, ಎಂ.ಕಾಂ ಮತ್ತು ಸಿ.ಎ ನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಆನಂದ ಸಿ.ಕುಂದರ್, ಗುಂಡು,ಬಿ.ಅಮೀನ್, ಸತೀಶ್ ಅಮೀನ್ ಬಾರ್ಕೂರು, ಉದಯ್ ಕುಮಾರ್ , ಮೋಹನ್ ಕರ್ಕೇರ , ವಾಸುದೇವ ಸಾಲ್ಯಾನ್, ಭರತ್ ಕುಮಾರ್ ಎರ್ಮಾಳ್, ರಾಜೇಂದ್ರ ಹಿರಿಯಡ್ಕ, ಮೊಗವೀರ ಮಹಿಳಾ ಸಭಾಧ್ಯಕ್ಷೆ ಪೂರ್ಣಿಮಾ ಸಿ.ಇದ್ದರು.
ದ.ಕ.ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ.ಸಿ.ಕೋಟ್ಯಾನ್ ಸ್ವಾಗತಿಸಿದರು. ಸತೀಶ್ ಅಮೀನ್ ನಿರ್ವಹಿಸಿದರು.