ಉಡುಪಿ : ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತಿಯ ಅಂಗವಾಗಿ ಸೆಪ್ಟೆಂಬರ್ 10ರಂದು ಮಲ್ಪೆ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬೆಳಗ್ಗೆ ಧಾರ್ಮಿಕ ಪೂಜಾ ವಿಧಿ - ವಿಧಾನಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಾವೂ ಕೂಡ ಇಂತಹ ವೇದಿಕೆಯಲ್ಲಿ ಸನ್ಮಾನಗೊಂಡು ಹತ್ತಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಾಯ ಮಾಡುವಂತಹ ದಿನಗಳು ತಮಗೆ ಒದಗಿಬರಲಿ ಎಂದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಜತ್ತನ್ ರವರು ಶುಭ ಹಾರೈಸಿದರು.
ಶಾಲಾ ಅಧ್ಯಕ್ಷರಾದ ರಘುರಾಮ್ ಸುವರ್ಣ ರವರು ದಿಕ್ಸೂಚಿ ಭಾಷಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರ್ಮೆ ಫೌ೦ಡೇಷನ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಮಾತನಾಡಿ ವಿದ್ಯೆಯಿಂದ ಸ್ವತಂತ್ರರಾಗಿರಿ ಎಂಬ ಗುರುಗಳ ಸಂದೇಶದನ್ವಯ ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘವು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾ ದಾನ ಮಾಡುವ ಮೂಲಕ ಅವರ ಸಂದೇಶವನ್ನು ಪರಿಪೂರ್ಣಪಡಿಸುವಲ್ಲಿ ಸಫಲವಾಗಿದೆ ಎಂದರು.
2021 - 22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಅಧಿಕ ಅಂಕ ಪಡೆದ ಮಲ್ಪೆ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿ ಪರೀಕ್ಷೆಯಲ್ಲಿ 80% ಕ್ಕಿಂತ ಅಧಿಕ ಅಂಕ ಪಡೆದ ಕೊಡವೂರು ಗ್ರಾಮಕ್ಕೆ ಒಳಪಟ್ಟ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ನಾರಾಯಣಗುರು ಜಯಂತಿ ಪ್ರಯುಕ್ತ ಮಲ್ಪೆ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಬಿಲ್ಲವ ಮಹಿಳಾ ಘಟಕದ ಸದಸ್ಯರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಲ್ಪೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯು 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯು 100% ಫಲಿತಾಂಶ ಪಡೆದ ಬಗ್ಗೆ ಸಂಘದ ವತಿಯಿಂದ ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕುಮಾರ್ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಡಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬಿಲ್ಲವ ಮಹಿಳಾ ಘಟಕ ಹಾಗೂ ನಾರಾಯಣಗುರು ಸೇವಾದಳದ ಸದಸ್ಯರು ವಿವಿಧ ವಿನೋದವಳಿಗಳನ್ನು ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಜಿಲ್ಲಾ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ದಿವಾಕರ್ ಸನಿಲ್, ಕಾನಗುಡ್ಡೆ ಮಹಾಲಿಂಗೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗೋಪಾಲ್ ಸಿ. ಬಂಗೇರ, ಜಯದುರ್ಗಾ ಪರಮೇಶ್ವರಿ ದೇವಸ್ಥಾನ ಕನ್ನರ್ಪಾಡಿ ಇದರ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ಕರ್ಕೇರ ಇಂಜಿನಿಯರಿಂಗ್ ವರ್ಕ್ಸ್ ಕೊಪ್ಪಲ್ ತೋಟ ಇದರ ಮಾಲಕರಾದ ಪ್ರಕಾಶ್ ಕರ್ಕೇರ, ಸಂಘದ ಉಪಾಧ್ಯಕ್ಷರಾದ ಲೋಕನಾಥ್ ಕರ್ಕೇರ, ಕೋಶಾಧಿಕಾರಿಯವರಾದ ಹರಿನಾಥ್ ಕೆ. ಸುವರ್ಣ, ಶಾಲಾ ಕಾರ್ಯದರ್ಶಿಯವರಾದ ಲಕ್ಷ್ಮೀಶ್ ಎಂ. ಬಂಗೇರ, ನಾರಾಯಣಗುರು ಸೇವಾದಳದ ಸಂಚಾಲಕರಾದ ನಿತಿನ್ ಅಮೀನ್, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷರಾದ ಆಶಾ ಜೆ. ಬಂಗೇರ, ಭಜನಾ ಸಂಚಾಲಕರಾದ ಬಿ. ಬಿ. ಪೂಜಾರಿ, ವಿದ್ಯಾರ್ಥಿಗಳು, ಪೋಷಕರು ಸಂಘದ ಮತ್ತು ಉಪ ಸಮಿತಿಯ ಸದಸ್ಯರುಗಳು, ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಸುನಿಲ್ ದಾಸ್ ಎಂ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು , ಮಹಿಳಾ ಘಟಕದ ಸದಸ್ಯರಾದ ಚಂದ್ರಿಕಾ ವಿಜಯ್, ಜಯಲಕ್ಷ್ಮಿ ಶೇಖರ್, ನಿವೇದಿತಾ ಯಾದವ್ ಪಾರ್ಥಿಸಿದರು, ಸಂಘದ ಜೊತೆ ಕಾರ್ಯದರ್ಶಿ ಉಮೇಶ್ ಸುವರ್ಣ ವಂದಿಸಿದರು ಬಿಲ್ಲವ ಮಹಿಳಾ ಘಟಕದ ಸದಸ್ಯರಾದ ವಾರಿಜಾ ಮಧುಸೂದನ್ ಮತ್ತು ನಿರ್ಮಾಲ ಟೀಚರ್ ಕಾರ್ಯಕ್ರಮ ನಿರೂಪಿಸಿದರು.