ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರೋಟರಿ ಸಮುದಾಯ ದಳ ಇನ್ನಂಜೆ - ಪದಪ್ರದಾನ

Posted On: 12-09-2022 11:16PM

ಇನ್ನಂಜೆ : ರೋಟರಿ ಸಮುದಾಯ ದಳ ಇನ್ನಂಜೆ ಮಾತೃಸಂಸ್ಥೆ ರೋಟರಿ ಕ್ಲಬ್ ಶಂಕರಪುರ (ವಲಯ - 5 ರೋಟರಿ ಜಿಲ್ಲೆ 3182) ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಸೆಪ್ಟೆಂಬರ್ 11ರಂದು ಇನ್ನಂಜೆಯ ದಾಸ ಭವನದಲ್ಲಿ ಜರಗಿತು.

ರೋಟರಿ ಕ್ಲಬ್, ಶಂಕರಪುರ ಅಧ್ಯಕ್ಷರಾದ ರೋ.ಗ್ಲ್ಯಾಡ್ಸನ್ ಕುಂದರ್ ಪದಪ್ರದಾನ ಮಾಡಿದರು. ನಿರ್ಗಮನ ಅಧ್ಯಕ್ಷರಾದ ಆರ್ ಸಿ‌ ಸಿ‌ ಪ್ರಶಾಂತ್ ಶೆಟ್ಟಿ ನೂತನ ಅಧ್ಯಕ್ಷರಾದ ಆರ್ ಸಿ‌ ಸಿ‌ ದಿವೇಶ್ ಶೆಟ್ಟಿಯವರಿಗೆ ಮತ್ತು ನಿರ್ಗಮನ ಕಾರ್ಯದರ್ಶಿ ಆರ್ ಸಿ‌ ಸಿ‌. ಮನೋಹರ್ ಕಲ್ಲುಗುಡ್ಡೆ ನೂತನ ಕಾರ್ಯದರ್ಶಿ ಆರ್ ಸಿ‌ ಸಿ‌ ವಿಕ್ಕಿ ಪೂಜಾರಿಯವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಇದೇ ಸಂದರ್ಭ ಉಡುಪಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಟರಾಜ ಉಪಾಧ್ಯಾಯರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ‌ ಇನ್ನಂಜೆ ಸಿ.ಎ. ಬ್ಯಾಂಕ್‌ ಅಧ್ಯಕ್ಷರಾದ ರಾಜೇಶ್ ರಾವ್‌, ಝೋನಲ್ ಕೋ-ಆರ್ಡಿನೇಟರ್ ರೋನ್ - 5 ರೋ.ಗುರುರಾಜ್ ಭಟ್, ರೋಟರಿ ಶಂಕರಪುರ ಪೂರ್ವಾಧ್ಯಕ್ಷರಾದ ರೋ.ವಿಕ್ಟರ್ ಮಾರ್ಟಿಸ್, ರೋಟರಿ ಶಂಕರಪುರ ಪೂರ್ವ ಕಾರ್ಯದರ್ಶಿ ರೋ.ಜೆರಾಮ್ ರೊಡ್ರಿಗೆಸ್, ರೋಟರಿ ಶಂಕರಪುರ ಕಾರ್ಯದರ್ಶಿ ರೋ.ಸಿಲ್ವಿಯಾ ಕ್ಯಾಸ್ಥಲಿನೋ , ಇನ್ನಂಜೆ ಆರ್ ಸಿ‌ ಸಿ ಸಭಾಪತಿ ರೋ.ಮಾಲಿನಿ ಶೆಟ್ಟಿ, ರೋ. ನವೀನ್ ಅಮೀನ್ ಶಂಕರಪುರ ಉಪಸ್ಥಿತರಿದ್ದರು.

ಆರ್ ಸಿ‌ ಸಿ‌. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಆರ್ ಸಿ‌ ಸಿ‌. ಮನೋಹರ್ ವರದಿ ವಾಚಿಸಿದರು. ರೋ.ಚಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಆರ್ ಸಿ‌ ಸಿ‌. ವಿಕ್ಕಿ ಪೂಜಾರಿ ವಂದಿಸಿದರು.