ಬಂಟಕಲ್ಲು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಂಟಕಲ್ಲು ಇವರ ಆಶ್ರಯದಲ್ಲಿ ಸಂಕಷ್ಟ ಹರ ಚತುರ್ಥಿಯ ಪ್ರಯುಕ್ತ ಪ್ರಥಮ ಬಾರಿಗೆ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯಲ್ಲಿ ಸಾಮೂಹಿಕ ಗಣ ಹೋಮ ಪೂಜೆ ಸಂಪನ್ನಗೊಂಡಿತು.
ಹೇರೂರು ಶ್ರೀ ಗುರು ರಾಘವೇಂದ್ರ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮುಲ್ಕಾ ಡಿ ಪಂಜಿಮಾರು ನಾಗರಾಜ್ ಭಟ್ ರವರಿಂದ ಪೂಜಾ ವಿಧಿ ವಿಧಾನಗಳು ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಮಾಧವ ಕಾಮತ್, ಗೌರವಾಧ್ಯಕ್ಷರಾದ ಶಂಕರ ನಾಯಕ್, ಮಾಜಿ ಗೌರವ ಅಧ್ಯಕ್ಷರಾದ ಶೇಖರ ಪೂಜಾರಿ, ಕೃಷ್ಣ ಮೂಲ್ಯ, ಉದಯ ದೇವಾಡಿಗ, ವಿಜ್ಞೆಶ್ ಶೆಟ್ಟಿ, ನಿತಿನ್ ರಾವ್, ರವಿ ಆಚಾರ್ಯ, ಉದಯ ರಾವ್, ಕಾರ್ಯದರ್ಶಿ ದಿನೇಶ್ ದೇವಾಡಿಗ ಹೇರೂರು, ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ಶಂಕರ್ ದೇವಾಡಿಗ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಶಶಿಕಲಾ, ಕಾರ್ಯದರ್ಶಿ ಪವಿತ್ರ ರಾವ್ ಮುಂತಾದವರು ಉಪಸ್ಥಿತರಿದ್ದರು.