ಕಾಪು : ರೋಟರಿ ಶಂಕರಪುರ ವತಿಯಿಂದ ಸೆಪ್ಟೆಂಬರ್ 12ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರುಗಳಾದ ರಘುರಾಮ್ ಕೋಟ್ಯಾನ್ ಸುಭಾಸ್ ನಗರ, (ಮುಖ್ಯೋಪಾಧ್ಯಾಯರು ಆದಿಉಡುಪಿ ಪ್ರೌಢಶಾಲೆ ಆದಿ ಉಡುಪಿ )ಹಾಗೂ ರಾಚೆಲ್ ಐಡಾ ಮರಿಯಾ ಡಿಮೆಲ್ಲೊ ( ನಿವೃತ್ತ ಶಿಕ್ಷಕಿ ಪ್ರಾಥಮಿಕ ಶಾಲೆ ಮುಳೂರು) ಇವರುಗಳನ್ನು ಸನ್ಮಾನಿಸಲಾಯಿತು.
ರೋಟರಿ ಶಂಕರಪುರದ ಅಧ್ಯಕ್ಷರಾದ ರೊ.ಗ್ಲಾಡ್ಸನ್ ಕುಂದರ್ ರವರು ಸ್ವಾಗತಿಸಿದರು. ರೊ. ನಂದನ್ ಕುಮಾರ್ ರವರು ರೋಟರಿ ಪ್ರಾರ್ಥನೆಯನ್ನು ಮಾಡಿದರು. ವೃತ್ತಿ ಸೇವಾ ನಿರ್ದೇಶಕರಾದ ರೊ. ವೆಲೇರಿಯನ್ ನೊರೂಂಹ್ನ, ಕಾರ್ಯದರ್ಶಿ ರೊ. ಸಿಲ್ವಿಯ ಕಸ್ಟಲೀನೋ, ಜಾರ್ಜ್ ಡಿಸಿಲ್ವ, ಅಂತೋನಿ ಡೇಸಾ, ವಿಕ್ಟರ್ ಮಾರ್ಟಿಸ್,ಪೌಲ್ ಕ್ವಾಡ್ರಸ್ ರೋಟರಿ ಸದಸ್ಯರು ಉಪಸಿತರಿದ್ದರು.