ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಜಿ ಎಸ್ ಟಿ ಕುರಿತು ಮಾಹಿತಿ ಕಾರ್ಯಗಾರ
Posted On:
17-09-2022 09:50PM
ಕಾರ್ಕಳ : ಕ್ರಿಯೇಟಿವ್ ಪಿ ಯು ಕಾಲೇಜು ಕಾರ್ಕಳದ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಜಿ ಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಕುರಿತಾಗಿ ಮಾಹಿತಿ ಕಾರ್ಯಗಾರವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿನಯ್ ಹೆಗಡೆ, ಖ್ಯಾತ ತೆರಿಗೆ ಸಲಹೆಗಾರರು ಆಗಮಿಸಿ ಜಿ ಎಸ್ ಟಿ ಕುರಿತ ಮಾಹಿತಿಯನ್ನು ನೀಡಿದರು.
ಜಿ ಎಸ್ ಟಿ ಎನ್ನುವುದು ʼಒಂದು ದೇಶ-ಒಂದು ತೆರಿಗೆʼ ಪರಿಕಲ್ಪನೆಯಲ್ಲಿರುವ ಪರೋಕ್ಷ ತೆರಿಗೆಯಾಗಿದ್ದು, ಈ ತೆರಿಗೆಯು ಪ್ರತಿ ಮೌಲ್ಯದ ಸೇರ್ಪಡೆಗೆ ವಿಧಿಸುವ ತೆರಿಗೆಯಾಗಿರುತ್ತದೆ. ಇಂದು ಜಿ ಎಸ್ ಟಿ ಎನ್ನುವುದು ಶ್ರೀಸಾಮಾನ್ಯನಿಗೆ ಯಾವುದೇ ಹೊರೆಯಾಗದೇ, ಅಗತ್ಯ ಸರಕುಗಳ (ಬಿಡಿ ಸರಕುಗಳ) ಮೇಲೆ ಯಾವುದೇ ಜಿ ಎಸ್ ಟಿಯನ್ನು ವಿಧಿಸದೇ ಇರುವುದು ಬಡವರಿಗೆ ಅನುಕೂಲವಾಗಿದೆ.
ಎಲ್ಲಾ ಪರೋಕ್ಷ ತೆರಿಗೆಯನ್ನು ಒಂದೇ ಸೂರಿನಡಿಯಲ್ಲಿ ತಂದು ಕೇಂದ್ರ ಹಾಗೂ ರಾಜ್ಯಕ್ಕೆ ಸಮಪಾಲು ಕಂದಾಯವನ್ನು ನಿರ್ಧರಿಸುವ ತೆರಿಗೆಯು ದೇಶದ ಅಭಿವೃದ್ಧಿಗೆ ಪೂರಕವಾದುದು ಎಂದರು.
ಜಿ ಎಸ್ ಟಿ ಹಂತಗಳು, ಜಿ ಎಸ್ ಟಿ ಐ ಎನ್ , ಇ-ವೆ ಬಿಲ್ಲ್ ಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಒದಗಿಸಿದರು. ಕಾಲೇಜಿನ ಸಹ ಸಂಸ್ಥಾಪಕರಾದ ಗಣಪತಿ ಕೆ ಎಸ್, ಉಪನ್ಯಾಸಕರಾದ ರಾಘವೇಂದ್ರ ಬಿ ರಾವ್, ಉಮೇಶ್ ಮತ್ತು ಅಕ್ಷತಾ ಜೈನ್ ಪಾಲ್ಗೊಂಡಿದ್ದರು.