ಉಡುಪಿ : ರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ (ನಿ.) ಉಡುಪಿ ಇದರ 2021-22 ರ ಸಾಲಿನ ಮೊದಲ ವರ್ಷದ ಮಹಾಸಭೆಯು ಸೆಪ್ಟೆಂಬರ್ 17 ರಂದು ಉಡುಪಿಯ ಅಜ್ಜರಕಾಡಿನ ಪುರಭವನದಲ್ಲಿ ನಡೆಯಿತು.
ಈ ಮಹಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೆ.ರಘುಪತಿ. ಭಟ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ನೂತನ ನಿರ್ದೇಶಕರಾದ ಎಸ್. ಕೆ.ಮಂಜುನಾಥ
ರಿಕ್ಷಾ ಚಾಲಕರ ಮಾಲಕರ ಸೌಹಾರ್ದ ಭಾಗವಹಿಸಿದ್ದರು. ಸಹಕಾರಿ(ನಿ)ಯ ಅಧ್ಯಕ್ಷರಾದ ಸುರೇಶ್ ಅಮೀನ್ ಅಧ್ಯಕ್ಷತೆಯಲ್ಲಿ ನಡೆಯಿತು.2021-22ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಜೂರು ಮಾಡಲಾಯಿತು.
ಉಪಾಧ್ಯಕ್ಷರಾದ ಸಂತೋಷ್ ರಾವ್ ಕಾರ್ಕಳ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕುಲಾಲ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸೊಸೈಟಿಯ ಉಪಾಧ್ಯಕ್ಷ ಸಂತೋಷ್ ರಾವ್, ನಿರ್ದೇಶಕರುಗಳಾದ ಜಗದೀಶ ಕೋಟ್ಯಾನ್, ಗೋಪಾಲ ಕೃಷ್ಣ ಶೆಟ್ಟಿ, ನಾಗರಾಜ ಕಿಣಿ, ನಾರಾಯಣ ಬಿ.ಕೆ. ರವೀಂದ್ರ ನಾಯಕ್,ಪ್ರಭಾಕರ ಶೆಟ್ಟಿ, ಲೋಕೇಶ ರಾವ್,ಅಶೋಕ ಶೆಟ್ಟಿ, ಟಿ.ಗೋಪಾಲಕೃಷ್ಣ ಕಾಮತ್, ಹರೀಶ್ ಕೋಟ್ಯಾನ್,ಶ್ಯಾಮ,ಸುದೇಶ್ ನಾಯ್ಕ್ ಸಹಕರಿಸಿದರು.ಈ ಬಾರಿಯ ಮಹಾಸಭೆಯ ಶೇರುದಾರರು,ಗ್ರಾಹಕರು, ಪಿಗ್ಮಿ ಏಜೆಂಟರು ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕುಲಾಲ್ ಇವರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ರವೀಶ್ ಕುಮಾರ್ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡರು. ಸ್ವಪ್ನ.ಎಸ್.ಅಮೀನ್ ನಿರೂಪಣೆ ಮಾಡಿದರು. ಅಭಿಜಿತ್ ನಾಯ್ಕ್ ವಂದಿಸಿದರು.