ಕಟಪಾಡಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ, ಉಡುಪಿ ವಲಯ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಉಡುಪಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಉಡುಪಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ಇವರ ಸಹಯೋಗದೊಂದಿಗೆ ಎಸ್ ವಿ ಎಸ್ ಶಾಲೆ ಕಟಪಾಡಿ ಇವರ ಆಶ್ರಯದಲ್ಲಿ ಅಚ್ಚಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸೆಪ್ಟೆಂಬರ್ 9 ರಂದು ನಡೆಯಿತು.
ಈ ಸ್ಪರ್ಧೆಯಲ್ಲಿ ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುಮಾರು 25 ಮಂದಿ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಗಳಿಸಿರುತ್ತಾರೆ.
ಶಾಲಾ ಸಂಚಾಲಕರಾದ ವಂ. ಗುರು ಫರ್ಡಿನಾಂಡ್ ಗೊನ್ಸಾಲ್ವಿಸ್, ಶಾಲಾ ಪ್ರಾಂಶುಪಾಲೆ ಪ್ರಿಯಾ ಕೆ ಡೆ'ಸಾ, ಶಾಲಾ ಸಂಯೋಜಕ ರಾದ ವಂ. ಗುರು ವಿಜಯ್ ಡಿಸೋಜ, ಶಿಕ್ಷಕ ವಿನಯ್ ಶೆಟ್ಟಿ, ಶಿಕ್ಷಕಿಯರಾದ ಅಸುಂತ ದಾಂತಿ, ಕೋಮಲಾಂಗಿ, ತನುಶ್ರೀ ಹಾಗೂ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಸೋಹನ್ ( ಜಾನಪದ ಗೀತೆ), ನಿಖಿಲ್ (ಗಝಲ್), ಆಲ್ಡ್ರಿನ್ (ಹಿಂದಿ ಭಾಷಣ), ಶ್ರೀಶಾಂತ್ (ಚಿತ್ರ ಕಲೆ), ಅದಿತಿ ( ಚರ್ಚಾ ಸ್ಪರ್ಧೆ) ಹಾಗೂ ಮೆಲ್ರಿಯ (ಭಾವಗೀತೆ) ಹಾಜರಿದ್ದರು.