ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ಒಕ್ಕೂಟ - ಅಭಾ ಕಾಡ್೯ ನೋಂದಾವಣೆ ಕಾರ್ಯಕ್ರಮ
Posted On:
18-09-2022 04:52PM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ಒಕ್ಕೂಟ ಇದರ ವತಿಯಿಂದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಹಾಗೂ ಅಭಾ ಕಾರ್ಡ್ ಸಂಯೋಜನೆಯೊಂದಿಗೆ ಉಚಿತ ಹೊಸ ಆಯುಷ್ಮನ್ ಕಾರ್ಡ್ ನೋಂದಾವಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮಹಾದೇವಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಪು ಪುರಸಭೆಯ ಸದಸ್ಯರಾದ ಅನಿಲ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಾದ ಜಯಂತಿ, ಕಾಪು ಒಕ್ಕೂಟದ ಅಧ್ಯಕ್ಷರಾದ ರಮಾ ಎಸ್ ಶೆಟ್ಟಿ, ವಲಯದ ಮೇಲ್ವಿಚಾರಕರಾದ ಮಮತಾ, ಕಾಪು ಒಕ್ಕೂಟದ ಅಧ್ಯಕ್ಷರಾದ ಸುಲೋಚನಾ ಬಂಗೇರ, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರೇಮ ರಮೇಶ್ ರವರು ಸ್ವಾಗತಿಸಿದರು. ಉಷ ಉಮೇಶ್ ಕರ್ಕೆರ ವಂದಿಸಿದರು.