ಮಟ್ಟಾರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ಇದರ ನೇತೃತ್ವದಲ್ಲಿ ನವೆಂಬರ್ 27 ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದ ಮನವಿ ಪತ್ರ ಇಂದು ಬಿಡುಗಡೆ ಮಾಡಲಾಯಿತು.
ವಿಶ್ವ ಹಿಂದೂ ಪರಿಷದ್ ಮಟ್ಟಾರು ಘಟಕದ ಗೌರವಾಧ್ಯಕ್ಷ ವಿಜಯ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಮತ್ತು ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಕರಸೇವಕರಾದ ಪಾಂಗಾಳ ಪಾಂಡುರಂಗ ಶ್ಯಾನಭಾಗ್ ಮನವಿ ಪತ್ರ ಬಿಡುಗಡೆ ಮಾಡಿದರು.
ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಕರಸೇವಕರಾದ ಸುಂದರ ಪ್ರಭು ಶಿರ್ವ,ರಮೇಶ್ ಪ್ರಭು ಬೆಳೆಂಜಾಲೆ,ದಿನೇಶ್ ಪಾಟ್ಕರ್ ಮಟ್ಟಾರು,ಶ್ರೀಪತಿ ಕಾಮತ್ ಶಿರ್ವ, ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಕಾರ್ಯದರ್ಶಿ ರಾಜೇಂದ್ರ ಶೆಣೈ, ಶಿರ್ವ ವಲಯ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್,ಮಟ್ಟಾರು ಘಟಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ,ಬಜರಂಗದಳ ಸಂಚಾಲಕ ವಿಶ್ವನಾಥ ಆಚಾರ್ಯ, ಮಾತೃಶಕ್ತಿ ಪ್ರಮುಖ್ ಸುಲೋಚನಾ ಆಚಾರ್ಯ, ದುರ್ಗಾವಾಹಿನಿ ಸಂಚಾಲಕಿ ದೀಕ್ಷಾ ಪ್ರಭು ಉಪಸ್ಥಿತರಿದ್ದರು.ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಪ್ರಸ್ತಾವನೆಗೈದರು.