ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ವಲಯ ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪರ್ಕಳದಿಂದ- ಗುಡ್ಡೆಯಂಗಡಿ ವರೆಗಿನ ಮುಖ್ಯ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಆಗ್ರಹಿಸಿ ಮತ್ತು ಉಡುಪಿ ಜಿಲ್ಲಾಡಳಿತ ಮತ್ತು ಕೇಂದ್ರ ಸರಕಾರ ಹಾಗೂ ಬಿಜೆಪಿ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಆತ್ರಾಡಿ ಪೇಟೆಯಲ್ಲಿ ಗುರುವಾರದಂದು ಬ್ರಹತ್ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿತ್ತು.
ಈ ಪ್ರತಿಭಟನೆಯಲ್ಲಿ ವಿನಯ್ ಕುಮಾರ್ ಸೊರಕೆ ಮಾತನಾಡಿ ಹಲವಾರು ವಾಹನಗಳು ಸಂಚರಿಸುವಂತಹ ಪರ್ಕಳ ಗುಡ್ಡೆಯಂಗಡಿ ರಸ್ತೆಯಲ್ಲಿ ಪ್ರತಿ ದಿನ ಅಪಘಾತ ಹೆಚ್ಚುತ್ತಿದೆ ಹಾಗೂ ಈ ರಸ್ತೆಯು ಜನರ ಜೀವವನ್ನು ಪಡೆದುಕೊಳ್ಳಲು ಆಹ್ವಾನ ನೀಡಿ ಕಾದು ಕುಳಿತಂತಿದೆ. ಇಂತಹ ರಸ್ತೆ ಯನ್ನು ಶೀಘ್ರವಾಗಿ ಸರಿಪಡಿಸಿದೆ ಇದ್ದರೆ ನಾವೆಲ್ಲರೂ ಲೋಕಸಭೆ ಮತ್ತು ರಾಜ್ಯ ಸಭೆಯ ಪ್ರಮುಖ ಕಚೇರಿಗಳ ಮುಂದೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಚರಣ್ ವಿಠ್ಠಲ್ ಕುದಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು, ಶಶಿಧರ್ ಜತನ್ನ, ಇಸ್ಮಾಯಿಲ್ ಆತ್ರಾಡಿ, ಉಮೇಶ್ ಕಾಂಚನ್,ತಂಗಣ್ಣ ಸುದಣ್ಣ,ದಿನೇಶ್ ಪೂಜಾರಿ,ಗಂಪ ರವೀಂದ್ರ, ಲಕ್ಷ್ಮೀ ನಾರಾಯಣ, ಗುರುದಾಸ್ ಭಂಡಾರಿ, ದಿಲೀಪ್ ಹೆಗ್ಡೆ, ಕಿರಣ್ ಹೆಗ್ಡೆ, ಸಂತೋಷ್ ಶೆಟ್ಟಿ, ನಾಗರಾಜ್ ಪ್ರಗತಿ ನಗರ, ಸುಧೀರ್, ನಿತಿನ್ ಶೆಟ್ಟಿ ಮತ್ತು ಅಮರ್ ಭೈರಂಪಲ್ಲಿ, ಸೌರಭ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.