ಉಡುಪಿ : ಇಲ್ಲಿನ ರೋಟರಿ ಸೌಟ್ಕ್ ಭವನ,
ಕಮಲ ಬಾಯಿ ಹೈಸ್ಕೂಲ್ ಕಡಿಯಾಳಿ ಉಡುಪಿಯಲ್ಲಿ ಸೆಪ್ಟೆಂಬರ್ 21ರಂದು ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ತಂಡವು 2 ದಿನ ವೇಷ ಧರಿಸಿದ ಬಂದ ಹಣವನ್ನು ವಿದ್ಯೆಗಾಗಿ ಸಹಾಯ ನಿಧಿ ಹಸ್ತಾಂತರ ಕಾರ್ಯಕ್ರಮದ ಮೂಲಕ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನುಮಲಬಾರ್ ಶಾಖಾ ಮುಖ್ಯಸ್ಥ ಹಪೀಜ್ ರೆಹಮಾನ್ ವಹಿಸಿದ್ದರು.
ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆ ಉಡುಪಿ ಮುಖ್ಯ ಶಿಕಕ್ಷಕಿ ಸುಜಾತ ಶೆಟ್ಟಿ, ಜಿಲ್ಲಾ ತರಬೇತಿ ಆಯುಕ್ತರಾದ ಆನಂದ್ ಬಿ ಅಡಿಗ, ರಾಜ್ಯ ಸಹಾಯಕ ಸಂಘಟನ ಆಯುಕ್ತಾದ ಸುಮನ್ ಶೇಖರ್, ಕೆವಿಎಸ್ಎಮ್ ಕಾಲೇಜಿನ ಪ್ರವೀಣ್ ಆಚಾಯ೯ , ಎಸ್ ವಿ ಎಸ್ ಪದವಿ ಪೂರ್ವ ಕಾಲೇಜು, ವಿದ್ಯಾ ಲಕ್ಷ್ಮೀ ಗ್ರೂಪ್ ಆಫ್ ಎಜುಕೇಶನ್ ಇನ್ಸ್ಟಿಟ್ಯೂಟ್, ವೈಕುಂಠ ಬಾಳಿಗ ಕಾನೂನು ವಿದ್ಯಾಲಯದ ಉಪನ್ಯಾಸಕರು ಹಾಗೂ ವಿವಿಧ ಸಂಸ್ಥೆಗಳ ಪಧಾದಿಕಾರಿಗಳು ಭಾಗವಹಿಸಿದ್ದರು.
ಈ ಸಂಧಭ೯ದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ದಾನಿಗಳ ಸಮುಖದಲ್ಲಿ ವಿದ್ಯಾರ್ಥಿಗಳಾದ ಕಮಲಾ ಪಿ ಐತಾಳ್ ಹಂಗಾರಕಟ್ಟೆ, ಅವಿನಾಶ್ ಮೂಡು ಅಲೆವೂರು, ವಿನೀಶ್ ಎಸ್ ಸಂತೆಕಟ್ಟೆ ಹಾಗೂ ಹೃದಯದ ಶಸ್ತ್ರ ಚಿಕಿತ್ಸೆ ಮಾಡಲು ಇರುವ 2 ವಷ೯ 7 ತಿಂಗಳಿನ ಮಗು ಪೀಯುಷ್ ಕುಮಾರ್ ಹಂಪನಕಟ್ಟೆ . ಪ್ರತಿ ಒಬ್ಬರಿಗೆ ತಲಾ 10 ಸಾವಿರ ರೂಪಾಯಿ ಚೆಕ್ ವಿತರಿಸಲಾಯಿತು.
ಶಮಿ೯ನಾ ಬಾನು ಕಾರ್ಯಕ್ರಮ ನಿರೂಪಿಸಿದರು.
ಅಮೃತ್ ಸ್ವಾಗತಿಸಿದರು. ಹಿತೇಶ್ ಆರ್ ಶೆಟ್ಟಿ ಪ್ರಸ್ತಾವನೆಗೈದರು. ಸೃಜನ್ ಎಸ್ ಶೇರಿಗಾರ್ ವಂದಿಸಿದರು .
ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ತಂಡದ
ಸೃಜನ್ ಎಸ್ ಶೇರಿಗಾರ್ , ಅನುರೂಪ್,ರಾಜೇ ಸಾಬ್, ರೋಯ್ಸ್ಟಾನ್, ಹಿತೇಶ್, ಲತೇಶ್, ಚೇತನ್,
ಅಮೃತ್, ಅಶೀಶ್, ಶ್ರೇಯಸ್ಸ್ , ತರುಣ್, ಅಕ್ಷಯ್ ಭಟ್, ಪ್ರಪುಲ್, ಶ್ರೇಯಸ್ಸ್ ಶೇರಿಗಾರ್, ಆಯುಷ್, ಆಧಿ ಆಚಾಯ೯, ದಶ೯ನ್, ಅಕ್ಷಯ್, ಸವೆ೯ಶ್, ಸುಕೇತ್ ಉಪಸ್ಥಿತರಿದ್ದರು.