ಅಕ್ಟೋಬರ್ 4 : ರಕ್ಷಣಾಪುರ ಜವನೆರ್ನ ಕೂಟ ಕಾಪು ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ - ಹುಲಿ ವೇಷ ಸ್ಪರ್ಧೆ
Posted On:
24-09-2022 06:56PM
ಕಾಪು : ಎಂದರೆ ರಕ್ಷಣಾಪುರ. ಈ ಹೆಸರು ಬ್ರಾಂಡ್ ಆಗಬೇಕೆನ್ನುವ ಉದ್ದೇಶದಿಂದ ಸಾಕಷ್ಟು ಯುವಕರ ಅಭಿಲಾಷೆಯಾಗಿದೆ. ಇದರೊಂದಿಗೆ ದಸರಾ ಸಂದರ್ಭ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ದಸರಾ ಹಬ್ಬದ ಪ್ರಯುಕ್ತ ರಕ್ಷಣಾಪುರ ಜವನೆರ್ನ ಕೂಟ ಕಾಪು ಸಾರಥ್ಯದಲ್ಲಿ ಅಕ್ಟೋಬರ್ 4ರಂದು ಕಾಪು ಶ್ರೀ ಜನಾರ್ಧನ ದೇವಸ್ಥಾನದ ಬಳಿಯ ಮೈದಾನದಲ್ಲಿ (ಬಂಟರ ಸಂಘದ ಕಚೇರಿಯ ಮುಂಭಾಗ) 2 ಗಂಟೆಯಿಂದ ಹುಲಿ ವೇಷ ಸ್ಪರ್ಧೆಯಾದ ಕಾಪು ಪಿಲಿ ಪರ್ಬ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಕಾಪು ರಾಜೀವ್ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
ಇದೊಂದು ಪಕ್ಷಾತೀತವಾದ ಕಾರ್ಯಕ್ರಮ. ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಕಾಪು ಮಾರಿಗುಡಿಯ ತಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು ಪ್ರತಿ ತಂಡದಲ್ಲಿ 15 ಜನರಿಗೆ ಮಾತ್ರ ಅವಕಾಶ. ಧರಣಿ ಮಂಡಲ ಹಾಡಿಗೆ ಕುಣಿತ, ಮರಕಾಲು ಕುಣಿತ, ಅಕ್ಕಿಮುಡಿ ಎಸೆತ ಇತ್ಯಾದಿ ಪ್ರಕಾರಗಳನ್ನು ಪ್ರಸ್ತುತಪಡಿಸುವ ಅಂಶಗಳ ಮೇಲೆ ಬಹುಮಾನ ನೀಡಲಾಗುವುದು. ಪ್ರತಿ ತಂಡಕ್ಕೆ 20 ನಿಮಿಷದ ಕಾಲಾವಧಿ. ಪ್ರಥಮ 1ಲಕ್ಷ ರೂಪಾಯಿ , ದ್ವಿತೀಯ 50 ಸಾವಿರ ಬಹುಮಾನ ಹಾಗೂ ಇತರ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾವುದು. ಸ್ಪರ್ಧೆಯ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಈಗಾಗಲೇ 10 ತಂಡಗಳು ಹೆಸರು ನೋಂದಾಯಿಸಿದೆ. ಸೆಪ್ಟೆಂಬರ್ 30 ಹೆಸರು ನೋಂದಾವಣೆಗೆ ಕೊನೆಯ ದಿನ ಎಂದರು.
ಈ ಸಂದರ್ಭ ಕಾರ್ಯಕ್ರಮ ಆಯೋಜನೆಯ ಸಂಚಾಲಕ ನವೀನ್ ಶೆಟ್ಟಿ ಪಡುಬಿದ್ರಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಗಣೇಶ್ ಕೋಟ್ಯಾನ್, ರಮೀಝ್ ಹುಸೇನ್, ಶರ್ಫುದ್ದೀನ್, ಹರೀಶ್ ನಾಯಕ್, ರಕ್ಷಣಾಪುರ ಜವನೆರ್ನ ಕೂಟದ ಪ್ರಮುಖರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9964026471 / 8105780251/ 9900555542/ 9901731999/ 9844995937