ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆ ಹಾಗೂ ಬ್ರಹ್ಮಾವರ ಘಟಕ ಜಂಟಿ ಆಶ್ರಯದೊಂದಿಗೆ ಸೆಪ್ಟೆಂಬರ್ 25, ಆದಿತ್ಯವಾರದಂದು ಮಲ್ಪೆಯ ಫಿಶರೀಸ್ ಸಭಾಭವನದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಬೆಳಗ್ಗೆ 7 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ,
ಬೆಳಗ್ಗೆ 10ಗಂಟೆಗ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ, ಬೆಳಿಗ್ಗೆ 11 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 12:30 ಅನ್ನ ಸಂತರ್ಪಣೆ, ಸಂಜೆ 4 ಗಂಟೆಗೆ ಗಜಾನನ ಯಕ್ಷಗಾನ ಕಲಾ ಸಂಘ (ರಿ.) ತೊಟ್ಟಂ, ಬಡನಿಡಿಯೂರು ಕಲಾವಿದರಿಂದ ವೀರ ಕೋಟಿ ಚೆನ್ನಯ ತುಳು ಯಕ್ಷಗಾನ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.