ಕಾಪು : ಕುಂಜೂರಿನ ಶ್ರೀದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ರಮೋತ್ಸವವು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 4 ರ ಪರ್ಯಂತ ವೈಭವದಲ್ಲಿ ನೆರವೇರಲಿದೆ.
ಪ್ರತಿದಿನ ಉಷಃಕಾಲ ಪೂಜೆಯೊಂದಿಗೆ ಆರಂಭಗೊಂಡು ಚಂಡಿಕಾಯಾಗ ಹಾಗೂ ದುರ್ಗಾ ಹೋಮ,ಲಕ್ಷ್ಮೀ ಹೃದಯ ಹೋಮ,ಶ್ರೀಸೂಕ್ತ ಹೋಮ ಸಹಿತ ವಿವಿಧ ದುರ್ಗಾ ಹೋಮಗಳು,ವಾಯನ ದಾನ- ಕನ್ನಿಕಾ ಪೂಜೆಗಳು ಒಂಬತ್ತು ದಿನಗಳಲ್ಲೂ ನಡೆಯುವುದು.
ಮಧ್ಯಾಹ್ನ ಅಲಂಕಾರ ಪೂಜೆ, ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ. ಸಂಜೆ ದೀಪಾರಾಧನೆ,ಗಣಪತಿ ರಂಗಪೂಜೆ,ಹೂವಿನ ಪೂಜೆ,ನವರಾತ್ರಿ ಪೂಜೆಗಳು ನಡೆಯುವುದು. ಮಹಾನವಮಿಯಂದು ಸಾಮೂಹಿಕ ಹೂವಿನಪೂಜೆ,ಪುಸ್ತಕ ಪೂಜೆ ನಡೆಲಿದೆ. ವಿಜಯ ದಶಮಿಯಂದು ಸಾಮೂಹಿಕ ದುರ್ಗಾನಮಸ್ಕಾರ ಹೀಗೆ ನವರಾತ್ರಿ ಆಚರಣೆ ನೆರವೇರುವುದು ,ಪ್ರತಿನಿತ್ಯ ಹೂವಿನ ಅಲಂಕಾರವಿರುತ್ತದೆಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.