ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇಂದು ಕುಂಜೂರು ದುರ್ಗಾ ದೇವಸ್ಥಾನದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ

Posted On: 30-09-2022 01:30PM

ಕಾಪು : ಶ್ರೀ ದುರ್ಗಾ ಮಿತ್ರವೃಂದ ಕುಂಜೂರು, ಶ್ರೀ ದುರ್ಗಾ ಸೇವಾ ಸಮಿತಿ,ಕುಂಜೂರು, ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಆಶ್ರಯದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ (ರಿ.) ಬೆಂಗಳೂರು ಇವರ ಜನಜಾಗೃತಿ‌ ಅಭಿಯಾನ "ಐತಿಹಾಸಿಕ ಪರಂಪರೆ ಉಳಿಸಿ" ಕಾರ್ಯಕ್ರಮ ಸೆಪ್ಟೆಂಬರ್ 30, ಶುಕ್ರವಾರ ಕುಂಜೂರು ದುರ್ಗಾ ದೇವಸ್ಥಾನದಲ್ಲಿ ಸಂಜೆ 6 ಗಂಟೆಗೆ ಜರಗಲಿದೆ.

ಕಾರ್ಯಕ್ರಮವನ್ನು ದುರ್ಗಾ ದೇವಸ್ಥಾನ,ಕುಂಜೂರು ಇದರ ಅಧ್ಯಕ್ಷರಾದ ದೇವರಾಜ ರಾವ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅದಮಾರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಸುದರ್ಶನ ವೈ .ಎಸ್ ವಹಿಸಲಿದ್ದಾರೆ.

ಮುಖ್ಯ ಉಪನ್ಯಾಸಕಾರರಾಗಿ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಜ್ಯೋತಿಂದ್ರನಾಥ ಭಾಗವಹಿಸಲಿದ್ದಾರೆ. ವೇ.ಮೂ.ಚಕ್ರಪಾಣಿ ಉಡುಪ ಅರ್ಚಕರು, ಕೆ.ಎಲ್.ಕುಂಡಂತಾಯ, ಪ್ರಫುಲ್ಲ‌ ಶೆಟ್ಟಿ ,ಎಲ್ಲೂರು ಗುತ್ತು, ಸತೀಶ ಕುಂಡಂತಾಯ, ಚಂದ್ರಹಾಸ ಆಚಾರ್ಯ, ರಾಘವೇಂದ್ರ ಶೆಟ್ಟಿ , ಮ್ಯಾನೇಜರ್ ದುರ್ಗಾದೇವಸ್ಥಾನ ,ಕುಂಜೂರು ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.