ಅಕ್ಟೋಬರ್ 1 : ಸಹಬಾಳ್ವೆ ಕಾಪು ತಾಲೂಕು ಘಟಕದಿಂದ ಸಾಮರಸ್ಯ ನಡಿಗೆ
Posted On:
30-09-2022 01:57PM
ಕಾಪು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದ ಅಂಗವಾಗಿ ಸಾಮರಸ್ಯದ ಬದುಕಿನ ಉಳಿವಿಗಾಗಿ ಸಹಬಾಳ್ವೆ ಕರ್ನಾಟಕ ರಾಜ್ಯಾದ್ಯಂತ ಸಾಮರಸ್ಯ ನಡಿಗೆ ಕಾರ್ಯಕ್ರಮ ಆಯೋಜಿಸಿದ್ದು ಆ ಪ್ರಯುಕ್ತ ಸಹಬಾಳ್ವೆ ಕಾಪು ತಾಲೂಕು ಘಟಕ ಸಾಮರಸ್ಯ ನಡಿಗೆಯನ್ನು ಅಕ್ಟೋಬರ್ 1, ಶನಿವಾರ ಸಂಜೆ 4:30 ಕ್ಕೆ ಹಮ್ಮಿಕೊಂಡಿದ್ದು, ಕಾಪು ಜನಾರ್ದನ ದೇವಸ್ಥಾನದಿಂದ ಪ್ರಾರಂಭಗೊಂಡು ಕಾಪು ಪೇಟೆಯಲ್ಲಿ ಸಮಾಪನಗೊಳ್ಳಲಿದೆ. ಸಮಾಪನ ಸಭೆಯಲ್ಲಿ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಹಬಾಳ್ವೆ ಕಾಪು ಅಧ್ಯಕ್ಷರಾದ ನಿರ್ಮಲ ಕುಮಾರ್ ಹೇಳಿದರು.
ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.
ಇನ್ನೇನು ಚುನಾವಣೆಗಳು ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಧರ್ಮ ಮತ್ತು ಇನ್ನಿತರ ವಿಷಯಗಳ ಮೂಲಕ ಅಹಿತಕರ ಘಟನೆಗಳನ್ನು ಸೃಷ್ಟಿಸಿ ಶಾಂತಿ ಕದಡುವ ಸಮಯದಲ್ಲಿ ಸಾಮರಸ್ಯದ ನಡಿಗೆ ಅನಿವಾರ್ಯ. ಮುಂದಿನ ದಿನಗಳಲ್ಲಿ ಸರ್ವ ಧರ್ಮ, ಸಾಮರಸ್ಯದ ಚಿಂತನೆಯ ಹಲವಾರು ಕಾರ್ಯಕ್ರಮಗಳನ್ನು ಸಹಬಾಳ್ವೆ ಕಾಪು ತಾಲೂಕು ಘಟಕ ಹಮ್ಮಿಕೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ತಸ್ನೀಮ್ ಅರಾ, ನವೀನ್ ಚಂದ್ರ ಸುವರ್ಣ, ಅಖಿಲೇಶ್, ರಾಲ್ಫಿ ಡಿ ಕೋಸ್ಟ ಮತ್ತಿತರರು ಉಪಸ್ಥಿತರಿದ್ದರು.