ಕಾಪು : ಸಮಾಜ ಸೇವಾ ವೇದಿಕೆ ವತಿಯಿಂದ ಕಾಪು ಪೊಲೀಸ್ ಠಾಣಾ ಕಟ್ಟಡದ ನವೀಕರಣಕ್ಕೆ ಸಿಮೆಂಟ್ ನೆರವು
Posted On:
30-09-2022 03:22PM
ಕಾಪು : ಸಮಾಜ ಸೇವಾ ವೇದಿಕೆ ಕಾಪು ವತಿಯಿಂದ ಕಾಪು ಪೊಲೀಸ್ ಠಾಣಾ ಕಟ್ಟಡದ ನವೀಕರಣಕ್ಕೆ ಸಂಬಂಧಿಸಿದಂತೆ ಸ್ಲಾಪ್ ಮಾಡಲು ಸುಮಾರು 70 ಚೀಲ ಸಿಮೆಂಟ್ ಅಗತ್ಯತೆಯನ್ನು ಮನಗಂಡು ತಕ್ಷಣ ಸ್ಪಂದಿಸಿ ಠಾಣೆಗೆ ಸಿಮೆಂಟ್ ಕಳುಹಿಸಿದ ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಕಾಪು ಠಾಣಾಧಿಕಾರಿ ಪಿ.ಎಸ್.ಐ ಶ್ರೀ ಶೈಲ ಡಿ.ಎಂ ರವರಿಗೆ ಹಸ್ತಾಂತರಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಠಾಣಾಧಿಕಾರಿಯವರು ಸಮಾಜ ಸೇವಾ ವೇದಿಕೆಯ ಫಾರೂಕ್ ಚಂದ್ರನಗರ ನೇತ್ರತ್ವದಲ್ಲಿ ಕೋವಿಡ್ ಸಂದರ್ಭ ಕಷ್ಟದಲ್ಲಿದ್ದ ಕುಟುಂಬಕ್ಕೆ ಅಕ್ಕಿ ಮತ್ತು ದಿನಸಿ ,ಆಹಾರ, ಮೆಡಿಕಲ್ ಕಿಟ್, ಮಾಸ್ಕ್, ಗ್ಲೌಸ್, ಸಾನಿಟೈಜರ್ ನೀಡಿದನ್ನು ಹಾಗೂ ಇನ್ನಿತರ ಕಾರ್ಯಕ್ರಮವನ್ನು ಸ್ಮರಿಸಿದರು ಹಾಗೂ ವೇದಿಕೆಯ ಹತ್ತಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಜನರಿಗೆ ಸಹಾಯ ಆಗುವಂತೆ ಮಾಡಿದೆ ಎಂದರು.
ನಮ್ಮ ಪೊಲೀಸ್ ಠಾಣೆಯ ನವೀಕರಣಕ್ಕೆ 70 ಚೀಲ ಸಿಮೆಂಟ್ ನೀಡಿದ್ದು ಅವರ ಸಾಮಾಜಿಕ ಬಗ್ಗೆ ಇರುವ ಕಾಳಜಿ ಎತ್ತಿ ತೋರಿಸುತ್ತದೆ ಎಂದರು ಮುಂದೆಯೂ ಸಮಾಜಕ್ಕೆ ಇವರಿಂದ ಉತ್ತಮ ಕಾರ್ಯಕ್ರಮ ಸಿಗುವಂತಾಗಲಿ ಎಂದು ಹಾರೈಸಿದರು
ಈ ಸಂದರ್ಭದಲ್ಲಿ ತನಿಖೆ ವಿಭಾಗದ ಕ್ರೈಂ ಪಿ.ಎಸ್.ಐ ಎಂ. ಭರತೇಶ್ ಕಂಕಣವಾಡಿ
ಸಮಾಜ ಸೇವಾ ವೇದಿಕೆ ಗೌರವಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು, ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು,ಕಾರ್ಯದರ್ಶಿ ಲೋಕೇಶ್ ಭಟ್ ಪಾದೂರು, ಸದಸ್ಯರುಗಳಾದ ಅಶೋಕ್ ಶೇರಿಗಾರ್ ಅಲೆವೂರು, ಹಸನ್ ಇಬ್ರಾಹಿಂ ಹೆಚ್. ಆರ್. ರೆಸಿಡೆನ್ಸಿ ಶಿರ್ವ,
ಸಿ.ಆರ್.ಪ್ರಾಪರ್ಟಿಸ್ ಸಂತೋಷ್ ಆಚಾರ್ಯ ಶಿರ್ವ, ಸಾದಿಕ್ ಸಾಹಿಲ್ ಫೇಬ್ರಿಕೇಟರ್ಸ್ ಕಾಪು, ಸರ್ಫ್ರಾಜ್ ಏರ್ಮಲ್, ಗಣೇಶ್ ನಾಯ್ಕ್ ಪಯ್ಯಾರು ಕಾಪು ಪೊಲೀಸ್ ಠಾಣಾ ಸಿಬಂದಿಯವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮಾಜ ಸೇವಾ ವೇದಿಕೆ ಗೌರವ ಸಲಹೆಗಾರರದ ದಯಾನಂದ ಕೆ ಶೆಟ್ಟಿ ದೆಂದೂರು ನಿರೂಪಿಸಿದರು.