ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮುನಿಯಾಲ್ ಆಯುರ್ವೇದ ಮೆಡಿಕಲ್ ಸೈನ್ಸ್ ಮಣಿಪಾಲ : ಪ್ಲಾನೆಟ್ ಮಾರ್ಸ್ ಫೌಂಡೇಶನ್ ಸಂತೆಕಟ್ಟೆ ಸಂಸ್ಥೆಗೆ ಅಗತ್ಯ ವಸ್ತುಗಳ ಹಸ್ತಾಂತರ

Posted On: 30-09-2022 08:57PM

ಉಡುಪಿ : ಮುನಿಯಾಲ್ ಆಯುರ್ವೇದ ಮೆಡಿಕಲ್ ಸೈನ್ಸ್ ಮಣಿಪಾಲ ಇದರ ವತಿಯಿಂದ ನವರಾತ್ರಿ ಹಬ್ಬದ ಅಂಗವಾಗಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವೃಂದದಿಂದ ಆಹಾರ ಸಾಮಗ್ರಿ, ದೈನಂದಿನ ಅಗತ್ಯವಿರುವ ವಸ್ತುಗಳು, ಬಿಸ್ಕೆಟ್ ಹಾಗೂ ತಿಂಡಿ ತಿನಿಸುಗಳನ್ನು ಪ್ಲಾನೆಟ್ ಮಾರ್ಸ್ ಫೌಂಡೇಶನ್ (ರಿ.) ಸಂತೆಕಟ್ಟೆ ಈ ಸಂಸ್ಥೆಗೆ ನೀಡಲಾಯಿತು.

ಹಾಗೆಯೇ ಮಕ್ಕಳಿಗೆ ರೋಗನಿರೋದಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಯಾದ ಸಂಶಮನೀಯ ವಟಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮುನಿಯಾಲ್ ಕಾಲೇಜಿನ ಡಾ. ರಾಜಕಿರಣ್ , ಕಾಲೇಜಿನ ಕೌನ್ಸಿಲ್ ಅಧ್ಯಕ್ಷರಾದ ಶ್ರೀಪ್ರದ ಉಪಾಧ್ಯಾಯ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.