ಬೈಂದೂರು: ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಿಡೀರ್ ಭೇಟಿ
Posted On:
30-09-2022 10:37PM
ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರ ಕುಂದುಕೊರತೆಗಳ ಅಹವಾ ಲುಗಳನ್ನು ಸ್ವೀಕರಿಸಲು ಬಂದಿರುವುದಾಗಿ ಹೇಳಿದರು.
ಮಾಧ್ಯಮದ ಜೊತೆ ಮಾತನಾಡಿ ಎನ್ ಆರ್ ಎಲ್ ಎಮ್ ಘಟಕ ಇವಾಗಲೇ ಸರಕಾರ ಆದೇಶದಂತೆ ಘಟಕಕ್ಕೆ 17.50 ಲಕ್ಷ ಮಂಜೂರಾಗಿದ್ದು ತಕ್ಷಣ ಕಾಮಗಾರಿಯ ಸ್ಥಳ ಪರಿಶೀಲಿಸಿ ಮುಂದಿನ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಹರೀಶ್ ಮೇಸ್ತ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಕುಂತಲಾ ಮಾಧವ, ಸಿಬಂದಿಗಳು ಹಾಜರಿದ್ದರು.