ಮೂಳೂರು : ಕೈರಂಪನಿಗೆ ಬಿದ್ದ ಬೃಹತ್ ಗಾತ್ರದ ತೊರಕೆ ಮೀನುಗಳು
Posted On:
01-10-2022 10:42PM
ಮೂಳೂರು : ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ಶುಕ್ರವಾರ ಹಾಗೂ ಶನಿವಾರ ಎರ್ಮಾಳಿನ ಕೈರಂಪಣಿ ಮೀನುಗಾರರ ಬಲೆಗೆ ಬೃಹತ್ ಗಾತ್ರದ ತೊರಕೆ ಮೀನುಗಳು ಬಿದ್ದಿದೆ.
ತಲಾ 15 ರಿಂದ 50 ಕಿಲೋ ತೂಕದ ನೂರಾರು ತೊರಕೆ ಮೀನುಗಳು ಬಲೆಗೆ ಬಿದ್ದಿದ್ದು, ಈ ತೋರಕೆ ಮೀನುಗಳು ಕಿಲೋವೊಂದಕ್ಕೆ 250 ರೂ ನಿಂದ 300 ರೂ ಬೆಲೆ ಬಾಳುತ್ತದೆ.
ಹೇರಳವಾಗಿ ಸಿಕ್ಕ ತೊರಕೆ ಮೀನಿನಿಂದಾಗಿ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಈ ಮೀನನ್ನು ನೋಡಲೆಂದು ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿದ್ದರು.