ಇನ್ನಂಜೆ : ರೋಟರಿ ಸಮುದಾಯ ದಳ ಇನ್ನಂಜೆ ಮತ್ತು ಇನ್ನಂಜೆ ಗ್ರಾಮ ಪಂಚಾಯತ್ ಜಂಟಿಯಾಗಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆಯನ್ನು ಆಚರಿಸಿತು.
ಆ ಪ್ರಯುಕ್ತ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಕಲ್ಯಾಲು ಅವರ ಉಪಸ್ಥಿತಿಯಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಪೌರ ಕಾರ್ಮಿಕರಾದ ರೋಕೇಶ್ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕ ಆಚಾರ್ಯ, ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ಮಂಡೇಡಿ, ರೊ. ನವೀನ್ ಅಮೀನ್ ಶಂಕರಪುರ, ರೊ. ಮಾಲಿನಿ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಲಾ, ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ್ ಸಾಲಿಯಾನ್, ಪಂಚಾಯತ್ ಸದಸ್ಯರುಗಳಾದ ಸವಿತಾ ಶೆಟ್ಟಿ, ಅನಿತಾ ಮಥಾಯಸ್, ಸುನೀತಾ ಕುಲಾಲ್, ಜಯಶ್ರೀ, ರೋಟರಿ ಸಮುದಾಯ ದಳ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯರುಗಳಾದ ಮನೋಹರ್ ಕಲ್ಲುಗುಡ್ಡೆ , ವಜ್ರೇಶ್ ಆಚಾರ್ಯ, ಸುನೀಲ್ ಸಾಲಿಯಾನ್, ಜೇಸುದಾಸ್ ಸೋನ್ಸ್, ಸಂದೀಪ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.