ಉಡುಪಿ : ಜಿಲ್ಲೆಯಲ್ಲಿ ಜನತಾದಳ (ಜಾತ್ಯಾತೀತ)
ಪಕ್ಷದ ವತಿಯಿಂದ 153ನೇ ಗಾಂಧಿ ಜಯಂತಿಯನ್ನು ಉಡುಪಿ ಜಿಲ್ಲಾ ಪಕ್ಷ ಕಚೇರಿ ಯಲ್ಲಿ ಆಚರಿಸಲಾಯಿತು. ಮಹಾತ್ಮಾ
ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಗೈದು ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಮಾತನಾಡಿ, ಗಾಂಧಿಜಿಯವರ ಜೀವನವೇ ಒಂದು ಆದರ್ಶ, ನುಡಿದಂತೆ ನಡೆದು ತನ್ನ ಜೀವನವನ್ನು ಅದೇ ರೀತಿಯಲ್ಲಿ ಅನುಕರಣೆ ಮಾಡಿದ ಒಂದು ಮಹಾನ್ ವ್ಯಕ್ತಿ ಅವರ ಜೀವನ ನಮಗೆಲ್ಲರಿಗೂ ಆದರ್ಶ. ಅವರು ಏನು ಹೇಳುತ್ತಿದ್ದಾರೋ ಅದೇ ರೀತಿ ಜೀವನ ನಡೆಸುತ್ತಿದ್ದರು. ಇಂದಿನ ಕಲುಷಿತ ವಾತಾವರಣದಲ್ಲಿ ಅವರ ಅಹಿಂಸಾ ತತ್ವ ಜಾತ್ಯಾತೀತ ನಿಲುವು ನಮ್ಮ ದೇಶಕ್ಕೆ, ರಾಜ್ಯಕ್ಕೆ ತುಂಬಾ ಅಗತ್ಯ ಇದೆ. ಇದನ್ನು ನಾವು ಅನುಸರಿಸೋಣ ಎಂದು ನುಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಸುಧಾಕರ ಶೆಟ್ಟಿ, ವಾಸುದೇವ ರಾವ್, ಜಯರಾಮ ಆಚಾರ್ಯ, ಗಂಗಾಧರ ಬಿರ್ತಿ, ಜಯಕುಮಾರ್ ಪರ್ಕಳ, ಇಸ್ಮಾಯಿಲ್ ಪಲಿಮಾರು, ವೆಂಕಟೇಶ್ ಎಂ ಟಿ, ಬಿ. ಕೆ. ಮೊಹಮ್ಮದ್, ದೇವರಾಜ್, ಯು. ಎ. ರಶೀದ್, ರಂಗಾ ಕೋಟ್ಯಾನ್, ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.