ಶಂಕರಪುರ : ಟಿ ಬಿ ಕಾಯಿಲೆಯ ಬಗ್ಗೆ ಮಾಹಿತಿ ಶಿಬಿರ
Posted On:
04-10-2022 09:47AM
ಶಂಕರಪುರ : ರೋಟರಿ ಶಂಕರಪುರ, ಆರ್ ಸಿ ಸಿ ಕ್ಲಬ್ ಇನ್ನಂಜೆ, ಇನ್ನರ್ ವೀಲ್ ಕ್ಲಬ್ ಶಂಕರಪುರ ಜೊತೆಯಾಗಿ ಟಿ ಬಿ ಕಾಯಿಲೆಯ ಬಗ್ಗೆ ಮಾಹಿತಿ ಶಿಬಿರವು ಅಕ್ಟೋಬರ್ 3ರಂದು ರೋಟರಿ ಶತಾಬ್ದಿ ಭವನ ಶಂಕರಪುರದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಡಾ. ಶೈನಿ ಕ್ರಿಸ್ತಬೆಲ್ ರವರು ಟಿ ಬಿ ಕಾಯಿಲೆ ಯಾವ ರೀತಿ ಹರಡುತ್ತದೆ, ಸಂಘ ಸಂಸ್ಥೆಗಳು ಯಾವ ರೀತಿ ಸಹಾಯ ಮಾಡಬಹುದು, ಟಿ ಬಿ ಕಾಯಿಲೆ ಎಷ್ಟು ಸಮಯದಲ್ಲಿ ಗುಣವಾಗುತ್ತದೆ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಅಧ್ಯಕ್ಷರುಗಳಾದ ಗ್ಲಾಡಸನ್ ಕುಂದರ್, ದಿವೇಶ್ ಶೆಟ್ಟಿ, ಶಾಲಿನಿ ಪೂಜಾರಿ, ರೋಟರಿ ಕಾರ್ಯದರ್ಶಿ ಸಿಲ್ವಿಯಾ ಕಸ್ಟಲೀನೋ, ರೋಟರಿ, ಆರ್ ಸಿ ಸಿ, ಇನ್ನರ್ವಿಲ್ ಸದಸ್ಯರು ಉಪಸ್ಥಿತರಿದ್ದರು.