ಕಾಪು : ರಕ್ಷಣಾಪುರ ಜವನೆರ್ನ ಕೂಟ ಕಾಪು ದಸರಾ ಹಬ್ಬದ ಪ್ರಯುಕ್ತ ಕಾಪು ಜನಾರ್ಧನ ದೇವಸ್ಥಾನದ ಬಳಿಯ ಮೈದಾನಲ್ಲಿ ಜರಗಿದ ಹುಲಿ ವೇಷ ಸ್ಪರ್ಧೆ - 20022 ಕಾಪು ಪಿಲಿ ಪರ್ಬವನ್ನು ಕಾಪು ಮಾರಿಗುಡಿ ತಂತ್ರಿವರ್ಯರು
ಉದ್ಘಾಟಿಸಿ ಶುಭ ಹಾರೈಸಿದರು.
ಹುಲಿ ಕುಣಿತದ ಹೆಸರು ನೋಂದಾಯಿಸಿದ್ದ ಹತ್ತು ತಂಡಗಳಲ್ಲಿ ಒಂಭತ್ತು ತಂಡಗಳು ಇಪ್ಪತ್ತು ನಿಮಿಷಗಳ ಕಾಲವಧಿಯಲ್ಲಿ ತಮ್ಮ ಕುಣಿತದ ಜೊತೆಗೆ ಮುಡಿ ಎತ್ತುವಿಕೆ ಇತ್ಯಾದಿ ಪ್ರಕಾರಗಳ ಪ್ರದರ್ಶನ ನೀಡಿತು.
ಡ್ಯಾನ್ಸಿಂಗ್ ಸ್ಟಾರ್ ಎಡಪದವು ತಂಡದಿಂದ ನೃತ್ಯ ಕಾರ್ಯಕ್ರಮ, ಭಾರ್ಗವಿ ತಂಡದಿಂದ ಸಂಗೀತ ಕಾರ್ಯಕ್ರಮ ಜರಗಿತು. ಚಲನಚಿತ್ರ ನಟರಾದ ಅರ್ಜುನ್ ಕಾಪಿಕಾಡ್, ಚೈತ್ರ ಶೆಟ್ಟಿ, ಸಂದೀಪ್, ಮರ್ವಿನ್ , ಇಲ್ಲ್ ಒಕ್ಕೊಲ್ ಚಿತ್ರ ತಂಡವು ಪ್ರಮುಖ ಆಕರ್ಷಣೆಯಾಗಿತ್ತು. ಈ ಸಂದರ್ಭ ವಿವಿಧ ಕ್ಷೇತ್ರದ ಯುವ ಪ್ರತಿಭೆಗಳನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭ : ಈ ಸಂದರ್ಭ ಮಾತನಾಡಿದ ಕಾರ್ಯಕ್ರಮದ ರುವಾರಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ದೇಶ ವಿದೇಶದಲ್ಲಿ ಹುಲಿಕುಣಿತ ಪ್ರಸಿದ್ಧಿ ಹೊಂದಿದೆ. ನವರಾತ್ರಿ ತುಳುನಾಡಿನ ಸಾಂಸ್ಕೃತಿಕ ಹಬ್ಬ. ನಮ್ಮ ರಕ್ಷಣಾಪುರ ಜವರ್ನೆನ ತಂಡವು ಈ ಕಾರ್ಯಕ್ರಮ ಕಾಪುವಿನಲ್ಲಿಯೂ ಆಗಬೇಕೆಂಬ ಇಚ್ಛೆಯಿಂದ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂದಿನ ವರ್ಷವೂ ದೊಡ್ಡ ಮಟ್ಟದಲ್ಲಿ ಹುಲಿ ಕುಣಿತ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ವೈಯಕ್ತಿಕ ಮತ್ತು ತಂಡ ಪ್ರಶಸ್ತಿ ಪುರಸ್ಕೃತರು : ಪ್ರಥಮ ಬಹುಮಾನ ಒಂದು ಲಕ್ಷ ನಗದು ಜೊತೆಗೆ ಟ್ರೋಫಿಯನ್ನು ಅಶೋಕ್ ರಾಜ್ ಕಾಡಬೆಟ್ಟು ತಂಡವು ಪಡೆಯಿತು.
ದ್ವಿತೀಯ ಬಹುಮಾನವನ್ನು ಐವತ್ತು ಸಾವಿರ ನಗದು ಟ್ರೋಫಿಯೊಂದಿಗೆ ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡವು ಪಡೆಯಿತು.
ಮುಡಿ ಎತ್ತುವಿಕೆ : ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡ
ಕಿನ್ನಿ ಪಿಲಿ : ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡ
ವಿಶೇಷ ಕಪ್ಪು ಹುಲಿ : ಕಿಂಗ್ ಟೈಗರ್ ಕಾಪು ತಂಡ
ಅತ್ಯುತ್ತಮ ಹುಲಿ ಕುಣಿತ ತಂಡ : ಅಶೋಕ್ ರಾಜ್ ಕಾಡಬೆಟ್ಟು ತಂಡ ಪಡೆದುಕೊಂಡಿತು.
ಭಾಗವಹಿಸಿದ ತಂಡಕ್ಕೆ ನಗದು ಪ್ರೋತ್ಸಾಹಕರ ಗೌರವ ನೀಡಲಾಯಿತು.
ಕಾರ್ಯಕ್ರಮದಲ್ಲಿ ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಗುಲಾಂ ಅಹ್ಮದ್, ಶೇಖರ್ ಹೆಜ್ಮಾಡಿ, ವಿನಯ್ ಬಲ್ಲಾಳ್, ಶಿವಾಜಿ ಸುವರ್ಣ, ಸಾದಿಕ್, ವೈ ಸುಧೀರ್ ಕುಮಾರ್, ಗಣೇಶ್ ಕೋಟ್ಯಾನ್, ಶಾಂತಲತ ಶೆಟ್ಟಿ, ಜ್ಯೋತಿ ಮೆನನ್, ಅಶ್ವಿನಿ, ಸಾದಿಕ್, ಶರ್ಫುದ್ಧೀನ್, ಅಮೀರುದ್ದೀನ್, ಶೇಖಬ್ಬ, ಅಖಿಲೇಶ್, ಕೇಶವ ಸಾಲ್ಯಾನ್, ಸೌರಭ್ ಬಲ್ಲಾಳ್, ದೀಪಕ್ ಎರ್ಮಾಳ್, ಸತೀಶ್ಚಂದ್ರ, ಆಸೀಫ್, ಇಮ್ರಾನ್, ದೀಪ್ತಿ, ಶೋಭ ಬಂಗೇರ, ಫರ್ಝಾನ, ಹರೀಶ್ ನಾಯಕ್, ಸುನಿಲ್ ಬಂಗೇರ, ಪ್ರಭಾಕರ ಆಚಾರ್ಯ, ಗಿರೀಶ್ ಉದ್ಯಾವರ, ಕಾರ್ತಿಕ್ ಅಮೀನ್, ಎಂ ಎಸ್ ಮನ್ಸೂರ್, ಅಬಿದ್ ಆಲಿ, ಸಾಯಿ, ಯಶವಂತ್ ಅಮೀನ್, ಕರುಣಾಕರ್ ಪೂಜಾರಿ, ಜಿತೇಂದ್ರ ಪುಟಾರ್ಡೊ, ಲಕ್ಷ್ಮೀಶ್ ತಂತ್ರಿ, ಉಸ್ಮಾನ್ ಕಾಪು, ವಿಜಯ್ ಧೀರಜ್, ಶಬರೀಶ್ ಸುವರ್ಣ, ಸುಲಕ್ಷಣ್ ಪೂಜಾರಿ, ಯಶವಂತ ಪೂಜಾರಿ, ಲವ ಕರ್ಕೇರ, ದೇವರಾಜ್ ಕೋಟ್ಯಾನ್, ದೀಪಕ್ ಕೋಟ್ಯಾನ್, ನಯೇಶ್ ಕಾಪು, ಅಬ್ದುಲ್ಲ ಪಲಿಮಾರು, ಪ್ರಸಾದ್ ಬಂಗೇರ, ರೀನಾ ಡಿಸೋಜ, ರಾಧಿಕಾ, ವಿದ್ಯಾಲತ, ಯಾಕೂಬ್ ಮಜೂರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರೊ. ಕೃಷ್ಣಯ್ಯ ಮತ್ತು ಡಾ| ಗಣನಾಥ ಎಕ್ಕಾರು ತೀರ್ಪುಗಾರರಾಗಿ ಸಹಕರಿಸಿದ್ದರು.
ರಕ್ಷಣಾಪುರ ಜವನೆರ್ನ ಕೂಟದ ಅಧ್ಯಕ್ಷರಾದ ನವೀನ್ ಶೆಟ್ಟಿ ಸ್ವಾಗತಿಸಿದರು.
ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ರಮೀಝ್ ಹುಸೈನ್ ವಂದಿಸಿದರು.