ಪಡುಬಿದ್ರಿ: ಗಣೇಶ ಚತುರ್ಥಿಯಿಂದ ಆರಂಭಗೊಂಡು ವಿಜಯದಶಮಿಯವರೆಗೆ ಪೂಜಿಸಲ್ಪಟ್ಟು ಅದೇ ದಿನ ಸಂಜೆ ಮೆರವಣಿಗೆಯ ಮೂಲಕ ಜಲಸ್ಥಂಬನಗೊಳ್ಳುವ ಬಾಲ ಗಣಪತಿ ದೇವಳದ ಗಣಪತಿ ವಿಸರ್ಜನಾ ಮೆರವಣಿಗೆ ಇಂದು ಜರಗಿತು.
ಗಣೇಶ ಚತುರ್ಥಿಯಂದು ಮೊದಲ್ಗೊಂಡು ವಿಜಯದಶಮಿಯವರೆಗೆ ಪ್ರತಿನಿತ್ಯ ಸಂಜೆ ಪೂಜಾಕೈಂಕರ್ಯ ನಡೆಯುವುದು ಈ ಕ್ಷೇತ್ರದ ವಿಶೇಷವಾಗಿದೆ. ಇಲ್ಲಿ ಗಣಪತಿಗೆ ಹರಕೆಯ ರೂಪವಾಗಿ ರಂಗಪೂಜೆಯು ಪ್ರಮುಖವಾಗಿದೆ.
ಪೂಜಾ ಸೇವೆಯ ಬಳಿಕ ಸಂಜೆಯ ಹೊತ್ತಿಗೆ ಗಣಪತಿ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಮೆರವಣಿಗೆಯಲ್ಲಿ ಕ್ಷೇತ್ರದಿಂದ ಹೊರಟು ಪೇಟೆಯ ಮೂಲಕ ಕೆಳಗಿನ ಪೇಟೆಗೆ ಬಂದು ಬೀಚ್ ರಸ್ತೆಯ ಮೂಲಕ ಕ್ರಮಿಸಿ ಮುಂದೆ ಸಮುದ್ರದಲ್ಲಿ ಜಲಸ್ಥಂಭನಗೊಂಡಿತು.
ಈ ಸಂದರ್ಭದಲ್ಲಿ ಹುಲಿ ವೇಷದ ತಂಡ, ಭಜನಾ ಕುಣಿತ, ನಾಸಿಕ್ ಬ್ಯಾಂಡ್, ವೇಷಗಳು ಪ್ರಮುಖ ಆಕರ್ಷಣೆಯಾಗಿತ್ತು.