ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮೈಸೂರು ದಸರಾದಲ್ಲಿ ಪ್ರಮಖ ಆಕರ್ಷಣೆಯಾದ ತುಳುನಾಡ ಕಂಗಿಲು

Posted On: 07-10-2022 01:27PM

ಕಾಪು : ವಿಶ್ವವಿಖ್ಯಾತ ಪಡೆದ ಮೈಸೂರು ದಸರಾದಲ್ಲಿ ತುಳುನಾಡ ಜಾನಪದ ಕಲೆಯಾದ ಕಂಗಿಲು ನೃತ್ಯ ಪ್ರಮುಖ ಆಕರ್ಷಣೆಯಾಗಿತ್ತು. ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಕಂಗಿಲು ನೃತ್ಯದ ನೇತೃತ್ವವನ್ನು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಚರಣ್ ಪೊಲಿಪು ವಹಿಸಿದ್ದರು.

ಈ ತಂಡದಲ್ಲಿ ಕಾರ್ತಿಕ್ ಬಂಗೇರ ಪಡುಬಿದ್ರಿ, ವಿಖ್ಯಾತ್, ವರುಣ್. ಬಿ.ಕೋಟ್ಯಾನ್, ಕಿರಣ್ ಕಾಪು, ಅಂಕಿತ್ ನಾಯಕ್, ಸಂಧ್ಯ ನಾಯಕ್, ಪ್ರಥ್ವಿ ಹೆಗ್ಡೆ, ಅಂಬಿಕಾ ಸಾಗರ, ಆಕಾಶ್, ವಿನೋದ್, ಕಾರ್ತಿಕ್, ಪ್ರವೀಣ್, ದಿಲೀಪ್, ಅಶ್ವಥ್ ಕುಮಾರ್ (ಆಯುಷ್ ಗ್ರೂಪ್ ) ಭಾಗವಹಿಸಿದ್ದರು.