ಪಡುಬಿದ್ರಿ : ಬೀಚ್ ಸೂಪರ್ ವೈಸರ್ ಮೇಲೆ ಹಲ್ಲೆ - ದೂರು ದಾಖಲು
Posted On:
08-10-2022 12:58PM
ಪಡುಬಿದ್ರಿ : ಬೀಚ್ ಸೂಪರ್ ವೈಸರ್ ಆಗಿರುವ ವಿಜೇಶ್ ಆರ್. ಕೋಟ್ಯಾನ್ ಮೇಲೆ ಅವರ ಪರಿಚಯಸ್ಥರೇ ಆಗಿರುವ ಕಿರಣ್ ರಾಜ್, ಎರ್ಮಾಳಿನ ನಿತೇಶ್ ಮತ್ತು ಸುಮನ್ ಅವರು
2 ಸ್ಕೂಟಿಗಳಲ್ಲಿ ಬಂದು ಹಲ್ಲೆ ನಡೆಸಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಕಿರಣ್ ರಾಜ್ ನು ವಿಜೇಶ್ ಬಳಿ ಬಂದು ಮುಖ್ಯ ಬೀಚ್ ನಿರ್ವಹಣೆ ಮಾಡುತ್ತಿರುವ ಸುಕೇಶನ ಜತೆ ಕೆಲಸ ಮಾಡುವ ಬಗ್ಗೆ ಆಕ್ಷೇಪಿಸಿದ್ದಾನೆ. ಬಳಿಕ ವಿಜೇಶ್ ಅವರ ಮೇಲೆ ಹಲ್ಲೆ ಮಾಡಲಾಗಿದೆ.
ಈ ಸಮಯ ಬೀಚ್ ಲೈಫ್ ಗಾರ್ಡ್ ಕೆಲಸ ಮಾಡಿಕೊಂಡಿರುವ ಅಕ್ಷಯ ಕೋಟ್ಯಾನ್ ಗಲಾಟೆ ಬಿಡಿಸಲು ಬಂದಾಗ 2 ಮತ್ತು 3 ನೇ ಆರೋಪಿಗಳು ಅಕ್ಷಯ್ ಕೋಟ್ಯಾನ್ ಗು ಬೈದಿದ್ದು, ಕಿರಣ್ ರಾಜನು ನಿಮ್ಮಿಬ್ಬರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಜೇಶ್ ಅವರು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.