ಉಡುಪಿ : ಕತ್ತಲ ಚಿಗುರು ಮಕ್ಕಳ ಕಿರು ಚಿತ್ರದ ಬಿಡುಗಡೆ ಕಾರ್ಯಕ್ರಮವು ಅಕ್ಟೋಬರ್ 9 ರಂದು
ಬ್ರಹ್ಮಾವರ ಬಂಟರ ಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬ್ರಹ್ಮಾವರ ವಲಯ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಹಾವಂಜೆ ಉದ್ಘಾಟಿಸಿದರು.
ಕಿರು ಚಿತ್ರವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಂದಾಪುರ ವಲಯ ಅಧ್ಯಕ್ಷರಾದ ಎಂ ಗಣೇಶ್ ಕುಮಾರ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಅಧ್ಯಾಪಕರಾದ ಸಂಜೀವ ಮಡಿವಾಳ ಕುಕ್ಕಿಕಟ್ಟೆ ಬೆಳ್ಳಂಪಳ್ಳಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆದಿತ್ಯ ಭಾಸ್ಕರ್ ಕರಂಬಳ್ಳಿ, ಶಿಕ್ಷಣ ಸಂಯೋಜಕರು ಕುಂದಾಪುರ ವಲಯ ಶೇಖರ್ ಯು., ವಿ ಎಸ್ ಗ್ರೂಪ್ ಹಾಗೂ ನಮ್ಮ ಉಡುಪಿ ಟಿವಿ ನಿರ್ದೇಶಕರು ಹಾಗೂ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ( ರಿ ) ಉಡುಪಿ ಜಿಲ್ಲೆ ಇದರ ವಿನೋದ್ ಶೆಟ್ಟಿ, ಕಿರುತೆರೆ ನಟಿ ಪೂಜಾ ಶೆಟ್ಟಿ, ಹಾಲು ಉತ್ಪಾದಕರ ಸಹಕಾರಿ ಸಂಘ ಬೆಳ್ಳಂಪಳ್ಳಿ ಉಪಾಧ್ಯಕ್ಷ ಸದಾನಂದ ಶೆಟ್ಟಿ, ಭೂತರಾಜ ದೇವಸ್ಥಾನ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಜಿಲ್ಲಾಧ್ಯಕ್ಷರು ಹಾಲು ಉತ್ಪಾದಕರ ನೌಕರರ ಸಂಘ ಬ್ಯಾಂಕಿಂಗ್ ವಿಭಾಗದ ಓಂ ಪ್ರಕಾಶ್ ಕೆಮ್ಮಣ್ಣು, ನಿರ್ಮಾಪಕರಾದ ಮಮತಾ ಪಿ ಶೆಟ್ಟಿ ಶ್ರೀನಗರ, ಮಮತಾ ಸಂತೋಷ್ ಶೆಟ್ಟಿ, ರಮಣಿ ಹಾಗೂ ಚಿತ್ರತಂಡದ ಎಲ್ಲಾ ಸದಸ್ಯರು ಉಪಸ್ಥಿತಿಯಿದ್ದರು.
ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಂದಾಪುರ ಇದರ ಉಪಾಧ್ಯಕ್ಷರಾದ ಶಶಿಧರ್ ಶೆಟ್ಟಿ ಸ್ವಾಗತಿಸಿದರು. ಕಿರುಚಿತ್ರದ ಚಿತ್ರಕಥೆ ಸಾಹಿತ್ಯ ಸಂಗೀತ ನಿರ್ದೇಶಕ ದಿನೇಶ್ ಕೊಡವೂರು ವಂದಿಸಿದರು.