ಶಾಸಕ ಹರೀಶ್ ಪೂಂಜಾರ ಹಲ್ಲೆ ಯತ್ನ - ಶಾಸಕ ಲಾಲಾಜಿ ಆರ್ ಮೆಂಡನ್ ಖಂಡನೆ ; ಸೂಕ್ತ ಕ್ರಮಕ್ಕಾಗಿ ಆಗ್ರಹ
Posted On:
14-10-2022 10:01PM
ಕಾಪು : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಮಿತ್ರರಾದ ಹರೀಶ್ ಪೂಂಜಾರವರ ಮೇಲೆ ನಿನ್ನೆ ತಡರಾತ್ರಿ ತಮ್ಮ ಕೆಲಸಗಳನ್ನು ಮುಗಿಸಿ ವಾಪಸಗುತ್ತಿದ್ದಾಗ ಅವರ ಮೇಲೆ ಆಘಂತುಕರಿಂದ ಹಲ್ಲೆ ಯತ್ನ ನಡೆದಿರುವುದು ಅತ್ಯಂತ ಖಂಡನೀಯ ವಿಷಯ. ಒಬ್ಬ ಜನರಿಂದ ಆರಿಸಿ ಬಂದ ಜನಪ್ರತಿನಿಧಿಯ ಮೇಲೆ ನಡೆದಿರುವ ಈ ಕೃತ್ಯ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಆಗಿರುವ ಹಲ್ಲೆಯಂತೆ.
ಸಮಾಜದ ಪರವಾಗಿ ಅಥವಾ ಸಾಮಾಜಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಇಂತಹ ಹಲ್ಲೆಗಳು ಹೆಚ್ಚಾಗುತ್ತಿದ್ದು ಇದನ್ನು ನಿಗ್ರಹ ಮಾಡಲು ಸರ್ಕಾರ ತುರ್ತು ಕ್ರಮವನ್ನ ಕೈಗೊಳ್ಳಬೇಕು. ಜೊತೆಗೆ, ಬಂಧಿತನಾಗಿರುವ ಆರೋಪಿಯ ಸಂಪೂರ್ಣ ತನಿಖೆ ನಡೆಸಿ ಆತನ ಉದ್ದೇಶ ಮತ್ತು ಆತನ ಹಿಂದಿರುವ ಕೈಗಳ ಬಗ್ಗೆ ಸಮಗ್ರ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಜೊತೆಗೆ, ಶಾಸಕರಿಗೆ ಸರಿಯಾದ ಭದ್ರತೆಯನ್ನು ಒದಗಿಸಬೇಕು ಮತ್ತು ಇಂತಹ ಘಟನೆಗಳು ಇನ್ನು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹಾಗೂ ಗೃಹ ಸಚಿವರಿಗೆ ಆರಗ ಈ ಮೂಲಕ ಆಗ್ರಹಿಸುತ್ತೇನೆ ಎಂದು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.