ಬೆಳ್ಮಣ್ : ಜೇಸಿಐ ಇಂಡಿಯ ವಲಯದ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕೃಷಿ ರತ್ನ - 2022 ಪ್ರಶಸ್ತಿಯನ್ನು ಅಕ್ಟೋಬರ್ 16ರಂದು ಬೆಳ್ಮಣ್ ನಲ್ಲಿ ಜರಗಿದ ವಲಯ 15ರ ವ್ಯವಹಾರ ಸಮ್ಮೇಳನ 'ಸಂಚಲನ' ಸಾಧಕರ ಸಮಾಗಮ
ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಜೇಸಿಐ ಕಾಪುವಿನ ಶಾರದೇಶ್ವರಿ ಗುರ್ಮೆ ಅವರಿಗೆ ನೀಡಿ ಗೌರವಿಸಲಾಯಿತು.
ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶಾರದೇಶ್ವರಿಯವರು ಸಾವಯವ ಕೃಷಿ ಪದ್ಧತಿಯ ಮೂಲಕ ಭತ್ತದ ಬೇಸಾಯ ಮಾಡುತ್ತಿರುವುದಲ್ಲದೆ, ತೆಂಗು ಮತ್ತು ಅಡಿಕೆ ಕೃಷಿಯಲ್ಲಿಯೂ ತೊಡಗಿಸಿಕೊಂಡು ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ಘಟಕವನ್ನು ಸ್ಥಾಪಿಸಿ ಕೃಷಿಗೆ ಬೇಕಾದ ಗೊಬ್ಬರವನ್ನೂ ತಯಾರಿಸುತ್ತಿದ್ದಾರೆ. ವಿವಿಧ ಬಗೆಯ ತರಕಾರಿಗಳನ್ನು, ವಿವಿಧ ಹಣ್ಣಿನ ಗಿಡಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸುವ ಹವ್ಯಾಸವನ್ನು ಹೊಂದಿರುವ ಇವರು ಅತ್ಯುತ್ತಮ ಕೃಷಿಕರಾಗಿದ್ದಾರೆ. ಜೇಸಿಐ ಸಂಸ್ಥೆ, ಇನ್ನಿತರ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.