ವಿಕಲ ಚೇತನರ ಬಾಳಿನಲ್ಲಿ ಬೆಳಕು ಕಾಣುವ NSCDF ಕಾರ್ಯ ಸ್ತುತ್ಯರ್ಹ : ಲಾಲಾಜಿ ಆರ್ ಮೆಂಡನ್
Posted On:
18-10-2022 11:05PM
ಕಾಪು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಬೆಂಗಳೂರು ಪ್ರಾಯೋಜಕತ್ವದಲ್ಲಿ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮಂಗಳೂರು ಸಾರಥ್ಯದಲ್ಲಿ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದ ವಿಕಲಚೇತನರಿಗೆ ಪರಿಕರ ವಿತರಣಾ ಕಾರ್ಯಕ್ರಮ ಅಕ್ಟೋಬರ್ 18ರಂದು ಕಾಪುವಿನ ಶ್ರೀ ಆದಿಶಕ್ತಿ ವೀರಭದ್ರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪರಿಕರಗಳಿಗೆ ಹೂವಿನ ಎಸಳು ಚೆಲ್ಲುವ ಮೂಲಕ ಚಾಲನೆ ನೀಡಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಪ್ರತಿ ಕ್ಷೇತ್ರಗಳಲ್ಲಿಯೂ ನಡೆಯಬೇಕು ಆ ಮೂಲಕ ವಿಕಲ ಚೇತನರ ಬಾಳಿನಲ್ಲಿ ಬೆಳಕು ಕಾಣಬಹುದು ಎಂದ ಅವರು NSCDF ಕಾರ್ಯ ಸ್ತುತ್ಯರ್ಹ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕವಿ, ಲೇಖಕ ಕೆ.ವಿ.ಲಕ್ಷ್ಮಣ ಮೂರ್ತಿ ಮಾತನಾಡಿ ಇದೊಂದು ದೇಶಕ್ಕೆ ಮಾದರಿ ಕಾರ್ಯಕ್ರಮ , ಇದರಿಂದಾಗಿ ಅನೇಕರು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆವಹಿಸಿದ್ದ NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಮಾತನಾಡಿ ಇದು ಭಾಷಣ ಮಾಡುವ ಕಾರ್ಯಕ್ರಮವಲ್ಲ ಬದಲಿಗೆ ವಿಕಲ ಚೇತನರ ಬಾಳಿನಲ್ಲಿ ಬೆಳಕು ಚೆಲ್ಲುವ ಕಾರ್ಯಕ್ರಮ ಎಂದು ಹೇಳಿದರು.
15 ಹೊಲಿಗೆ ಯಂತ್ರ, 3 ಗಾಲಿ ಕುರ್ಚಿ ಮತ್ತು 1 ಶ್ರವಣ ಸಾಧನ ವಿಕಲ ಚೇತನರಿಗೆ ಹಸ್ತಾಂತರಿಸಲಾಯಿತು.
ಡಾ.ನೆಲ್ಲಿಷಾ, ಲಾವಣ್ಯ, KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ , ಶ್ರುತಿ ಎಂಟರ್ಪ್ರೈಸಸ್ ಮಾಲ್ಹಕ ಸುರೇಶ್ ಮತ್ತು NSCDF ಸದಸ್ಯೆ ಹರಿಣಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.