ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ನರಕ ಚತುರ್ದಶಿಯಂದು ಗೊಳಿಕಟ್ಟೆಯಲ್ಲಿ ಮುಳ್ಳಮುಟ್ಟೆ ಕಾರ್ಯಕ್ರಮ

Posted On: 19-10-2022 03:08PM

ಇನ್ನಂಜೆ : ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನರಕ ಚತುರ್ದಶಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವ ಮುಳ್ಳಮುಟ್ಟೆ ಕಾರ್ಯಕ್ರಮದಲ್ಲಿ ಜೋಡುಬಂಟ ನರ್ತನ ಸೇವೆಯು ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ವಿಠೋಬಾ ಭಜನಾ ಮಂದಿರ ಗೊಳಿಕಟ್ಟೆ ಇಲ್ಲಿಗೆ ಮೆರವಣಿಗೆಯ ಮೂಲಕ ಸಾಗಿ ಊರಿಗೆ ಬಂದಿರುವ ದುರಿತಗಳು ತೊಲಗಲಿ ಹಾಗೂ ನರಕಾಸುರನ ವಧೆ ಎಂಬ ಉದ್ದೇಶದಿಂದ ಮುಳ್ಳಿನ ರಾಶಿಗೆ ಬೆಂಕಿ ಕೊಡುವುದು ವಾಡಿಕೆಯಾಗಿದೆ.

ಈ ಬಾರಿ ಅಕ್ಟೋಬರ್ 24, ಸೋಮವಾರದಂದು ಮುಂಜಾನೆ ಗಂಟೆ 4:45 ರಿಂದ ಮುಳ್ಳಮುಟ್ಟೆ ಕಾರ್ಯಕ್ರಮ ನಡೆಯಲಿದೆ ಎಂದು ವಿಠೋಬಾ ಭಜನಾ ಮಂದಿರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.