ನವಂಬರ್ 7 ರಂದು ಉಡುಪಿಗೆ ಬರಲಿರುವ ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆ ಪೂರ್ವ ತಯಾರಿ ಸಭೆ
Posted On:
20-10-2022 10:25PM
ಉಡುಪಿ : ಅಯೋಧ್ಯ ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆಯ ಪೂರ್ವ ತಯಾರಿ ಬೈಠಕ್ ಅಕ್ಟೋಬರ್ 17 ರಂದು ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆಯು 26 ರಾಜ್ಯಗಳನ್ನು ಸುತ್ತಾಡಿ ಬರುವ ಯಾತ್ರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಚಾಲನೆಯನ್ನು ನೀಡಿದ್ದು.
ಈ ಯಾತ್ರೆಯು ನವಂಬರ್ 7 ರಂದು ಉಡುಪಿ ಜಿಲ್ಲೆಗೆ ಬರಲಿದ್ದು ಇದಕ್ಕೆ ಪೂರ್ವ ತಯಾರಿಗಾಗಿ ಯೋಚನೆ ಮತ್ತು ಯೋಜನೆಗಾಗಿ ಸಮಿತಿಯನ್ನು ರಚನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ವಿಜಯ ಕೊಡವೂರು ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ಮಂದಿರವನ್ನು ನಿರ್ಮಾಣಕ್ಕಾಗಿ ನಮ್ಮ ಹಿರಿಯರು ಜೀವನವನ್ನೇ ನೀಡಿದ್ದಾರೆ. ಜೊತೆಯಾಗಿ ಸಂಘಟಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ವಿಶ್ವ ಹಿಂದೂ ಪರಿಷತ್ ಅವರ ಮುಂದಾಳತ್ವದಲ್ಲಿ ಈ ಒಂದು ಹೋರಾಟಕ್ಕೆ ಕಿಚ್ಚನ್ನು ನೀಡಿ ನಮ್ಮ ಹಿರಿಯರು ಅದನ್ನು ಉಳಿಸುವ ಪ್ರಯತ್ನವನ್ನು ಮಾಡಿದ್ದಾರೆ ಕಾನೂನಾತ್ಮಕವಾಗಿ ಲಕ್ಷಾಂತರ ಜನ ಹೋರಾಟ ಮಾಡಿದ್ದಾರೆ ಹಾಗೂ ಸಾವು ನೋವು ನಮ್ಮ ಮನಸ್ಸಲ್ಲಿ ಇದ್ದು ಈ ಒಂದು ಅಯೋಧ್ಯೆಯ ದಿಗ್ವಿಜಯ ಸಂದರ್ಭದಲ್ಲಿ ನಾವು ಎಲ್ಲಾ ಸಂಘ ಸಂಸ್ಥೆ, ಭಜನಾ ತಂಡ, ಧಾರ್ಮಿಕ ಶ್ರದ್ಧಾ ಕೇಂದ್ರದ ಮುಖಾಂತರ ರಾಮನ ಮೂರ್ತಿಗೆ ಹಾಲನ್ನು ಅಭಿಷೇಕ ಮಾಡುವಂತ ಅವಕಾಶವನ್ನು ನೀಡಿದ್ದಾರೆ ಮತ್ತು ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಶಕ್ತಿ ಶಂತಾನಂದ ಮಹರ್ಷಿ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಹಿಂದೂ ಸಮಾಜದ ಎಲ್ಲಾ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಚಂದಕಾಣಿಸಿಕೊಡಬೇಕು ಮತ್ತು ಕೇವಲ ಮಂದಿರ ನಿರ್ಮಾಣ ಮಾತ್ರವಲ್ಲ ಜೊತೆಗೆ ರಾಮಾರಾಜ್ಯದ ನಿರ್ಮಾಣವಾಗಬೇಕಾಗಿದೆ.
ರಾಮನ ರೀತಿ ನಾವೆಲ್ಲ ನಡೆದು ರಾಮರಾಜ್ಯ ನಿರ್ಮಾಣ ಮಾಡುವಂತ ಅವಶ್ಯಕತೆ ಇದೆ ಎಂದರು.
ಹತ್ತು ಸಾವಿರ ಮಂದಿ ಧಾರ್ಮಿಕ ಸಭೆಗೆ ಸೇರಿ ತದನಂತರ ವಾಹನ ಜಾಥದ ಮುಖಾಂತರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದವರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಶೀರ್ವಚನ ಪಡೆದು ಅವರನ್ನು ತಲುಪಿಸುವಂತಹ ಜವಾಬ್ದಾರಿ ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರ ಹೆಗಲಿನಲ್ಲಿದೆ. ಆದ್ದರಿಂದ ಎಲ್ಲಾ ರಾಮಭಕ್ತರು ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಮತ್ತು ಈ ಕಾರ್ಯಕ್ರಮದ ಮುಖಾಂತರ ಸಮಾಜ ಜಾಗ್ರತೆಯಾಗಬೇಕು. ಹಿಂದೂ ಸಮಾಜದಲ್ಲಿ ಇರುವಂತಹ ಕುಂದು ಕೊರತೆಗಳು ನಿವಾರಣೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರುಷೋತ್ತಮ್ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಪಾಂಡುರಂಗ ಮಲ್ಪೆ,
ರಾಘವೇಂದ್ರ ಕುಂದರ್ (ವಿಶ್ವ ಹಿಂದೂ ಪರಿಷತ್),
ಮನೋಹರ್ ಶೆಟ್ಟಿ ತೊನ್ಸೆ, ರಾಧಾಕೃಷ್ಣ ಮೆಂಡನ್ ಮಲ್ಪೆ, ತೋನ್ಸೆ, ತಾರಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ದಾಮೋದರ್ ಶರ್ಮ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.